ಕುಂದಾಪುರ: "ನಾವು ಭಾರತೀಯರು ಎನ್ನುವ ಘನತೆಯೊಂದಿಗೆ ಜಾತ್ಯತೀತ, ಪ್ರಜಾಸತ್ತಾತ್ಮಕ, ಭ್ರಾತೃತ್ವದ ತಳಹದಿಯೊಂದಿಗೆ ರೂಪಿತವಾಗಿರುವ ಸಂವಿಧಾನದ ಅಳವಡಿಕೆ ಸ್ಮರಣೀಯ" ಎಂದು ಉಪವಿಭಾಗಾಧಿಕಾರಿ ಕೆ. ರಾಜು ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಮಂಗಳವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನೇತೃತ್ವದಲ್ಲಿ ನಡೆದ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಅವರು ಧ್ವಜಾರೋಹಣ ನಡೆಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು.
"ದೇಶದ ನಾಗರಿಕರ ಹಿತರಕ್ಷಣೆಯನ್ನು ಆದ್ಯತೆಯಾಗಿ ಇರಿಸಿಕೊಂಡು ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಮ್ಮ ಹಿರಿಯರು ವಿಶ್ವಕ್ಕೆ ಮಾದರಿಯಾಗಿ ರೂಪಿಸಿರುವ ನಮ್ಮ ಹೆಮ್ಮೆಯ ಸಂವಿಧಾನವನ್ನು ಅನುಸರಿಸುವುದು ನಮ್ಮ ಹೊಣೆ, ಆದ್ಯ ಕರ್ತವ್ಯ. ಕೋವಿಡ್ ಮಹಾವಿಪತ್ತಿನ ಸಂದರ್ಭದಲ್ಲಿ ಜಿಲ್ಲೆಯ ಜನತೆ ತೋರಿದ ಸ್ಪಂದನೆ ಇಡೀ ದೇಶಕ್ಕೆ ಮಾದರಿ. ಕುಸಿದಿರುವ ಉದ್ಯಮ ಹಾಗೂ ಆರ್ಥಿಕತೆ ಪುನಶ್ಚೇತನಗೊಳಿಸಬೇಕಾದ ಅನಿವಾರ್ಯತೆ ಇದೆ. ಕರಾವಳಿಯ ನೈಸರ್ಗಿಕ ಸೊಬಗನ್ನು ಬಳಸಿಕೊಂಡು ಪ್ರವಾಸೋದ್ಯಮವನ್ನು ಉತ್ತೇಜಿಸಬೇಕಾಗಿದೆ. ಸರಕಾರದ ಕಾರ್ಯಕ್ರಮಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಈ ನಿಟ್ಟಿನಲ್ಲಿ ನಮ್ಮ ಬದ್ಧತೆ ತೋರಬೇಕು" ಎಂದರು.
Kshetra Samachara
26/01/2021 08:14 pm