ಉಡುಪಿ: ಉಡುಪಿಯ ನಿಟ್ಟೂರಿನ ಬಾಲನ್ಯಾಯ ಮಂಡಳಿಯಲ್ಲಿ 72ನೇ ಗಣರಾಜ್ಯೋತ್ಸವ ನಡೆಯಿತು. ಪ್ರಧಾನ ಸಿವಿಲ್ ನ್ಯಾಯಾಧೀಶ ಜೆಎಂಎಫ್ ಸಿ ಮತ್ತು ಅಧ್ಯಕ್ಷ ಬಾಲನ್ಯಾಯ ಮಂಡಳಿ ಇರ್ಫಾನ್ ಅವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಶುಭ ಹಾರೈಸಿದರು.
ಈ ವೇಳೆ ವೀಕ್ಷಣಾಲಯದ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತಮ ಶಿಕ್ಷಣ, ಒಳ್ಳೆಯ ನಡತೆ ಬೆಳೆಸಿಕೊಂಡು ಜೀವನದಲ್ಲಿ ಮುಂದೆ ತಾವು ಕೂಡ ಅಧಿಕಾರಿಗಳಾಗಿ ಬನ್ನಿ ಎಂದು ಹಾರೈಸಿದರು. ಬಾಲ ನ್ಯಾಯ ಮಂಡಳಿಯ ಸದಸ್ಯರಾದ ರಾಜೇಶ್ , ಅಮೃತಕಲಾ, ಬದರಿನಾಥ ನಾಯರಿ, ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ, ಗಣೇಶ್ ಮರಾಠೆ ಮುಮ್ತಾಜ್ , ಕಾನೂನು ಪರಿವೀಕ್ಷಣಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಪ್ರಭಾಕರ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/01/2021 11:42 am