ಮುಲ್ಕಿ: ಅಕ್ಷಯ ಪತ್ರಿಕೆಯ ಸಂಪಾದಕರು, ಭಾರತ್ ಬ್ಯಾಂಕ್ ನ ಮಾಜಿ ಕಾರ್ಯಾಧ್ಯಕ್ಷರು, ಸಾಹಿತಿ, ಬಿಲ್ಲವ ಸಮಾಜದ ನಾಯಕರಾದ ಎಂ.ಬಿ. ಕುಕ್ಯಾನ್ ಅವರಿಗೆ ಶ್ರದ್ಧಾಂಜಲಿ ಸಭೆ ಮುಲ್ಕಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಸಭಾಗೃಹದಲ್ಲಿ ನಡೆಯಿತು.
ಹಿರಿಯ ಸಾಧಕನಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಎಂ.ಮಹಾಬಲ ಕುಕ್ಯಾನ್ ಅವರು ಸಾಹಿತ್ಯಲೋಕದ ಧೀಮಂತ ಸಾಧಕರಾಗಿದ್ದು, ಸಮಾಜಸೇವೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದರು ಎಂದರು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ. ರಾಜಶೇಖರ್ ಕೋಟ್ಯಾನ್ ಮಾತನಾಡಿ, ಎಂ.ಬಿ.ಕುಕ್ಯಾನ್ ಬಿಲ್ಲವ ಸಮಾಜದ ಆಸ್ತಿಯಾಗಿದ್ದು, ಮುಂಬೈ ಸಹಿತ ತುಳುನಾಡಿನ ಅನೇಕ ಕಡೆ ಅಕ್ಷಯ ಮಾಸಪತ್ರಿಕೆ ಮೂಲಕ ಸಮಾಜದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದರು ಎಂದರು.
ಪತ್ರಕರ್ತ ಪರಮಾನಂದ ಸಾಲ್ಯಾನ್ ಮಾತನಾಡಿ, ಎಂ.ಬಿ.ಕುಕ್ಯಾನ್ ಅವರ ಸಾಧನೆ ಅವಿಸ್ಮರಣೀಯ. ಅವರು ವ್ಯಕ್ತಿಯಲ್ಲ, ಶಕ್ತಿಯಾಗಿದ್ದರು ಎಂದು ಹೇಳಿದರು.
ದಿ. ಎಂ.ಬಿ.ಕುಕ್ಯಾನ್ ಅವರ ಪುತ್ರರಾದ ವಿನಯ್, ವಿನೇಶ್, ನಿಕಟವರ್ತಿ ಸದಾನಂದ ಕುಕ್ಯಾನ್, ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಮುಲ್ಕಿ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಎಚ್.ವಿ. ಕೋಟ್ಯಾನ್,ಬಾಲಚಂದ್ರ ಸನಿಲ್, ರಂಗಕರ್ಮಿ ಚಂದ್ರಶೇಖರ ಸುವರ್ಣ, ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಡಾ. ಹರಿಶ್ಚಂದ್ರ ಸಾಲ್ಯಾನ್, ಡಾ. ಅಚ್ಚುತ ಕುಡ್ವ, ಶರತ್ ಸಾಲ್ಯಾನ್ ನಾಗೇಶ್ ಬಪ್ಪನಾಡು ಮತ್ತಿತರರು ಉಪಸ್ಥಿತರಿದ್ದರು. ಬಿಲ್ಲವ ಮಹಾಮಂಡಲದ ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು ನಿರೂಪಿಸಿದರು.
Kshetra Samachara
25/01/2021 03:54 pm