ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಜ.29, 30ರಂದು ಮಹಿಳಾ ಯಕ್ಷ ಸಂಭ್ರಮ-2021

ಮೂಡುಬಿದಿರೆ: ಕರ್ನಾಟಕ ಯಕ್ಷಗಾನ ಅಕಾಡೆಮಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಯೋಗದೊಂದಿಗೆ ಆಳ್ವಾಸ್ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಜ. 29 ಮತ್ತು 30 ರಂದು ಮಹಿಳಾ ಯಕ್ಷಸಂಭ್ರಮ-2021 ಜರುಗಲಿ ದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜ.29 ರಂದು ಮಧ್ಯಾಹ್ನ 2 ರಿಂದ ಶ್ರೀ ದುರ್ಗಾಂಬಿಕಾ ಮಹಿಳಾ ಚೆಂಡೆ ಬಳಗ, ಕಡೇಕಾರ್ ಉಡುಪಿ ಇವರಿಂದ "ಚೆಂಡೆಯ ಕಲರವ", ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಇವರಿಂದ "ಪೂರ್ವರಂಗ" ಪ್ರದರ್ಶನವಿದೆ. ಬಳಿಕ ಮಹಿಳಾ ಯಕ್ಷ ಸಂಭ್ರಮ- 2021ರ ಉದ್ಘಾಟನೆ ನಡೆಯಲಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ ಅಧ್ಯಕ್ಷತೆ ವಹಿಸಲಿದ್ದು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಶ್ರೀ ಕ್ಷೇತ್ರ ಕಟೀಲು ಅರ್ಚಕ ಶ್ರೀ ಶ್ರೀಹರಿನಾರಾಯಣದಾಸ ಆಸ್ರಣ್ಣ ಹಾಗೂ ಉದ್ಯಮಿ ಶ್ರೀಪತಿ ಭಟ್ ಭಾಗವಹಿಸಲಿದ್ದಾರೆ.

ಜ.30ರಂದು ಸಂಜೆ 4.30ರಿಂದ ಸಮಾರೋಪ ನಡೆಯಲಿದ್ದು, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅಧ್ಯಕ್ಷತೆ ವಹಿಸಲಿದ್ದು, ಜೈನಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಉಮಾನಾಥ ಕೋಟ್ಯಾನ್, ಪುರಸಭಾಧಕ್ಷ ಪ್ರಸಾದ್ ಕುಮಾರ್, ತೆಂಕುತಿಟ್ಟು ಭಾಗವತ ಬಲಿಪ ನಾರಾಯಣ ಭಾಗವತ, ಯಕ್ಷಗಾನ ಸಂಘಟಕರಾದ ಶಾಂತರಾಮ ಕುಡ್ವ, ಎಂ.ದೇವಾನಂದ ಭಟ್ ಬೆಳುವಾಯಿ ಮತ್ತು ವಿದ್ಯಾ ರಮೇಶ್ ನಡಿಗುತ್ತು ಭಾಗವಹಿಸಲಿದ್ದಾರೆ ಎಂದರು.

Edited By : Manjunath H D
Kshetra Samachara

Kshetra Samachara

23/01/2021 07:53 pm

Cinque Terre

21.33 K

Cinque Terre

1

ಸಂಬಂಧಿತ ಸುದ್ದಿ