ಮುಲ್ಕಿ: ಮುಲ್ಕಿ ಸಮೀಪದ ಮಾನಂಪಾಡಿ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ನಡಿಬೈಲು ಕುಟುಂಬಸ್ಥರ ಗಡಿ ಪ್ರದಾನ ಸಮಾರಂಭ ನಡೆಯಿತು.
ಮಾನಂಪಾಡಿ ನಡಿಬೈಲು ಕುಟುಂಬಸ್ಥರ ಗುಡ್ಡ ಧೂಮಾವತಿ ದೈವದ ಎದೆಗಟ್ಟು ಹಿಂದಿನ ಕಾಲದಿಂದಲೂ ನಡೆದುಕೊಂಡು ಬರುತ್ತಿದ್ದು ತರುವಾಯ ಸುರೇಶ್ ಪೂಜಾರಿ ಯವರಿಗೆ ಅರ್ಚಕ ರಾಘವೇಂದ್ರ ಭಟ್ ಮಾನಂಪಾಡಿ ನೇತೃತ್ವದಲ್ಲಿ ಗಡಿ ಪ್ರದಾನ ಮಾಡಲಾಯಿತು.
ಈ ಸಂದರ್ಭ ರಾಘವೇಂದ್ರ ಭಟ್ ಮಾತನಾಡಿ, ಅನಾದಿ ಕಾಲದಿಂದಲೂ ಗಡಿ ಪ್ರದಾನ ಪದ್ಧತಿ ನಡೆದುಕೊಂಡು ಬರುತ್ತಿದ್ದು, ಕೊರೋನಾ ದಿಂದಾಗಿ ಈ ಬಾರಿ ಕಾರ್ಯಕ್ರಮ ಸರಳ ರೀತಿಯಲ್ಲಿ ನಡೆದಿದೆ.
ಜ.27 ರಿಂದ ಜ.29ರ ವರೆಗೆ ಮಾನಂಪಾಡಿ ಶ್ರೀ ಧೂಮಾವತಿ-ಜಾರಂದಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದ್ದು, ಭಕ್ತಾದಿಗಳು ಕೊರೊನಾ ನಿಯಮ ಪಾಲಿಸಿಕೊಂಡು ದೈವಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಗುತ್ತಿನಾರ್ ಭೋಜ ಶೆಟ್ಟಿ ಮಾನಂಪಾಡಿ, ದಿನೇಶ್ ಹೆಗ್ಡೆ ಮಾನಂಪಾಡಿ, ಬಾಲಚಂದ್ರ ಸನಿಲ್, ಕೃಷ್ಣಪ್ಪ ಸನಿಲ್, ಸತೀಶ್ ಮಾನಂಪಾಡಿ, ಅರುಣ್ ಶೆಟ್ಟಿ ಹೆಜಮಾಡಿ, ವಾಮನ್ ನಡಿಕುದ್ರು, ಗೋವಿಂದ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
20/01/2021 05:14 pm