ಉಡುಪಿ: ರಾಮಮಂದಿರ ನಿರ್ಮಾಣ ಶತಮಾನದ ಒಂದು ಪುಣ್ಯಪ್ರದ ಕೆಲಸ.ನಮ್ಮ ಕಾಲಘಟ್ಟದಲ್ಲಿ ಈ ಕೆಲಸ ಆಗುತ್ತದೆ ಎನ್ನುವುದು ಒಂದು ಹೆಮ್ಮೆ.
ಈ ಕಾರ್ಯಕ್ಕೆ ಕೈಜೋಡಿಸುವ ಕಾಶ ನಮ್ಮ ಹಿರಿಯರಿಗೂ ಸಿಕ್ಕಿಲ್ಲ. ಇನ್ನು ಮುಂದಿನ ಪೀಳಿಗೆಗೂ ಸಿಗುವುದಿಲ್ಲ ಎಂದು
ಅರೆಮಾದನಹಳ್ಳಿಯ ಶ್ರೀ ಶಿವಸುಜ್ಞಾನೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಕೊಕ್ಕರೆಯ ನಾಲ್ಕೂರಿನ ಕಜಕೆ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಆಗಮಿಸಿದ ಅವರು, ನಾವೆಲ್ಲರೂ ನಮ್ಮ ಶಕ್ತಿಯಾನುಸಾರ ಈ ಕೆಲಸದಲ್ಲಿ ಕೈಜೋಡಿಸೋಣ.
ನಾವು ಮಂದಿರಕ್ಕೆ ಕಿಂಚಿತ್ತು ದೇಣಿಗೆ ಸಮರ್ಪಣೆ ಮಾಡಿದರೆ ಅದನ್ನು ನಮ್ಮ ಮುಂದಿನ ಪೀಳಿಗೆ ಗೌರವದಿಂದ ನೆನಪಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
Kshetra Samachara
19/01/2021 10:17 am