ವರದಿ: ಸಂದೇಶ್ ಶೆಟ್ಟಿ ಆಜ್ರಿ
ಉಡುಪಿ: ಕರಾವಳಿ ಭಾಗ ಅಂದ್ರೆ ಅದು ದೈವಗಳ ಆರಾಧನಾ ಕೇಂದ್ರವಾಗಿದೆ. ಹೆಚ್ಚಾಗಿ ಕರಾವಳಿ ಭಾಗದಲ್ಲಿ ದೇವರಿಗಿಂತ ಹೆಚ್ಚಾಗಿ ದೈವಗಳನ್ನು ಪೂಜೆ ಮಾಡುವಂತೆ ಪಾರಂಪರಿಕ ಪದ್ಧತಿ ಇದೆ. ವರ್ಷಂಪ್ರತಿ ತಾವು ನಂಬಿಕೊಂಡು ಬಂದ ದೈವಸ್ಥಾನದಲ್ಲಿ ವಿಶೇಷವಾಗಿ ಕೆಂಡಸೇವೆ ದಕ್ಕೆ ಬಲಿ ಪೂಜೆ ಹೀಗೆ ಹಲವು ಸಾಂಪ್ರದಾಯಿಕ ಪೂಜೆಯನ್ನು ಒಳಗೊಂಡು ದೈವದ ಆರಾಧನೆಯ ಮಾಡಿಕೊಂಡು ಕರಾವಳಿ ಜನರು ಬಂದಿದ್ದಾರೆ. ಅದರಲ್ಲೂ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ ವರ್ಷದ ದೈವದ ಪೂಜೆ ದೈವಸ್ಥಾನಗಳಲ್ಲಿ ನಡೆಯುತ್ತಿದೆ, ಕುಂದಾಪುರ ತಾಲೂಕಿನ ವಾಲ್ತೂರು ಹೈಗುಳಿ ದೈವಸ್ಥಾನದಲ್ಲಿ ವಿಶೇಷವಾಗಿ ಜಾತ್ರ ಮಹೋತ್ಸವ ಕಾರ್ಯಕ್ರಮ ನೆರವೇರಿದೆ. ದರ್ಶನ ಪಾತ್ರಿಯ ಅಬ್ಬರದ ದರ್ಶನ ಗೆಂಡಸೇವೆ ಹಾಗೂ ಹರಕೆ ಹೊತ್ತು ಗೆಂಡಸೇವೆ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ಬಂದಿರುವಂತಹ ಭಕ್ತರು ದೇವರ ಕೃಪೆಗೆ ಪಾತ್ರರಾಗಿದ್ದಾರೆ.
ವಾಲ್ತೂರು ಹೈಗುಳಿ ದೇವಸ್ಥಾನದಲ್ಲಿ ವಿಶೇಷವಾಗಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಭಕ್ತರು ಈ ದೈವದ ಮೊರೆ ಹೋಗುತ್ತಾರೆ. ಹಲೋ ಗಣಗಳು ದೈವಗಳ ದೈವಸ್ಥಾನದಲ್ಲಿ ಪ್ರತಿಷ್ಠೆಯಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಕರುನಾ ನಿಯಮಾವಳಿಗಳನ್ನು ಪಾಲಿಸಿ ದೈವಸ್ಥಾನದ ಆಡಳಿತ ಮಂಡಳಿ ಮತ್ತು ಕಮಿಟಿ ವಿಶೇಷವಾಗಿ ಜಾತ್ರಾಮಹೋತ್ಸವವನ್ನು ಪೂರೈಸಿದೆ.
Kshetra Samachara
18/01/2021 10:58 pm