ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಭಜನೆಯಿಂದ ದೇವರ ಅನುಗ್ರಹ ಸಾಧ್ಯ: ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಮುಲ್ಕಿ: ಪಕ್ಷಿಕೆರೆ ಸಮಿಪದ ಪಂಜ ಕೊಯಿಕುಡೆ ಶ್ರೀ ವಿಠೋಬ ಭಜನಾ ಮಂದಿರದ ಪ್ರವೇಶವು ಪಂಜ ಮಹಾಗಣಪತಿ ಮಂದಿರ ದ ಸುರೇಶ್ ಭಟ್ ನೇತೃತ್ವದಲ್ಲಿ ಜ.18 ಸೋಮವಾರ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 8:55 ಕ್ಕೆನಡೆಯಿತು. ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ವಹಿಸಿದ್ದರು. ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಭಜನೆಯಿಂದ ದೇವರ ಅನುಗ್ರಹ ಸಾದ್ಯ.ಭಜನಾ ಸಂಘದಿಂದ ಸಂಸ್ಕೃತಿ ಉಳಿಸುವ ಕಾರ್ಯ ಶ್ಲಾಘನೀಯ.ಭಜನೆಯ ಮಹತ್ವ ಅರಗಿಸಿ ಕೊಂಡರೆ ದೇವರ ಅನುಗ್ರಹ ಸಾಧ್ಯ ಎಂದರು.

ಭಜನಾ ಮಂದಿರವನ್ನು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿ ಮಾತನಾಡಿ ಹಿಂದೂ ನಂಬಿಕೆಗಳು ಮೂಢನಂಬಿಕೆಗಳಲ್ಲ,ಭಜನೆ ಇರುವಲ್ಲಿ ವಿಭಜನೆ ಇಲ್ಲಭಕ್ತಿಯಿಂದ ಭಗವಂತನ ಸಾನಿಧ್ಯ ಸಾಧ್ಯ ಎಂದರು ದಾರ್ಮಿಕ ಉಪನ್ಯಾಸವನ್ನು ವಿದ್ವಾನ್ ಪಂಜ ಭಾಸ್ಕರ ಭಟ್ ನೀಡಿದರು. ಶ್ರೀ ವಿಠೋಬ ದೇವರ ನಂದಾದೀಪ ಪ್ರಜ್ವಲನೆ ಯನ್ನು ಮುಂಬೈ ಉದ್ಯಮಿ ರಘುರಾಮ ಶೆಟ್ಟಿ ನೆರವೇರಿಸಿದರು. ಸಭಾಕಾರ್ಯಕ್ರಮವನ್ನು ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ದಾನಿಗಳಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಜೀ ಸಚಿವ ಅಭಯಚಂದ್ರ ಜೈನ್ ನಡೆಸಿಕೊಟ್ಟರು. ಸಮಾರಂಭದ ಮುಖ್ಯ ಅಭ್ಯಾಗತರಾಗಿ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ಮೂಡಬಿದ್ರೆ, ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ,ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಬೆಂಗಳೂರು ಸತ್ಯವಾಣಿ ವಿದ್ಯಾಪೀಠ ಸಮೂಹ ಸಂಸ್ಥೆಗಳ ಡಾ. ದೇವಿಪ್ರಸಾದ್ ಶೆಟ್ಟಿ, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ದೆ,,ಸೂರ್ಯಕುಮಾರ್ ಹಳೆಯಂಗಡಿ,ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಉದ್ಯಮಿ ದಯಾನಂದ ಡಿ ಶೆಟ್ಟಿ, ದಾಮೋದರ ಭಂಡಾರಿ ,ತಾ. ಪಂ.ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಪಂ.ಮಾಜೀ ಅಧ್ಯಕ್ಷ ನಾಗೇಶ್ ಅಂಚನ್, ವಿಠೋಬ ಭಜನಾ ಮಂದಿರದ ಅಧ್ಯಕ್ಷ ಪಂಜ ಗುತ್ತು ಶಾಂತಾರಾಮ್ ಶೆಟ್ಟಿ, ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ವಸಂತ ದೇವಾಡಿಗ ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆ ಮಾರ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ದಾನಿಗಳಾದ ಮುಂಬೈ ಉದ್ಯಮಿ ರಘುರಾಮ ಶೆಟ್ಟಿ ದಂಪತಿಗಳನ್ನು ಹಾಗೂ ಮತ್ತಿತರ ದಾನಿಗಳನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಯಕ್ಷಗಾನ ವೈಭವ,ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾ ಸಂಗಮ ಕಲಾವಿದರಿಂದ ಶಿವದೂತೆ ಗುಳಿಗೆ ಎಂಬ ತುಳು ನಾಟಕ ನಡೆಯಿತು.

Edited By : Nagesh Gaonkar
Kshetra Samachara

Kshetra Samachara

18/01/2021 09:54 pm

Cinque Terre

8.31 K

Cinque Terre

0

ಸಂಬಂಧಿತ ಸುದ್ದಿ