ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕದ್ರಿ ಶ್ರೀ ಮಂಜುನಾಥ ಸ್ವಾಮಿಯ ನವ ದಿನಗಳ ವಾರ್ಷಿಕ ಉತ್ಸವ ಸಂಭ್ರಮ; ದೇವರ ಕಟ್ಟೆ ಸವಾರಿ, ವಿಶೇಷ ಪೂಜೆ

ಮಂಗಳೂರು: ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ವಾರ್ಷಿಕ ಉತ್ಸವ ಆರಂಭವಾಗಿದೆ.

ಜಾತ್ರೆ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದ್ದು, ಭಕ್ತರು ಸಂಭ್ರಮದಿಂದ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.‌ ಒಂಭತ್ತು ದಿನಗಳ ಕಾಲ ಉತ್ಸವ ನಡೆಯಲಿದ್ದು, ನಾಲ್ಕು ದಿವಸ ನಗರದ ಬೇರೆ ಬೇರೆ ಕಡೆಗೆ ಸವಾರಿ ಬಲಿ ಉತ್ಸವ ನಡೆಯುತ್ತದೆ.

ಇಂದು ಮಲ್ಲಿಕಟ್ಟೆ, ಕದ್ರಿ ಮಾರ್ಕೆಟ್ ತನಕ ದೇವರ ಸವಾರಿ ಬಲಿ ಉತ್ಸವ ನೆರವೇರಿತು.

ಕದ್ರಿ ಮೈದಾನ ಹತ್ತಿರ ಹೊಸದಾಗಿ ನಿರ್ಮಿಸಿದ ಅಶ್ವಥಕಟ್ಟೆಯಲ್ಲಿ ದೇವರನ್ನು ಇರಿಸಿ ಆರತಿ ಬೆಳಗಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವರ ಕುಳಿತುಕೊಳ್ಳುವ ಕಟ್ಟೆಯನ್ನು ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ವಾದ್ಯಗೋಷ್ಠಿ, ಗೊಂಬೆ ಕುಣಿತ ಸೇರಿದಂತೆ ಭಕ್ತರು ಭಜನೆ ಮಾಡುವುದರ ಮೂಲಕ ದೇವರ ಸವಾರಿ ಉತ್ಸವದಲ್ಲಿ ಪಾಲ್ಗೊಂಡರು.

Edited By : Nagesh Gaonkar
Kshetra Samachara

Kshetra Samachara

17/01/2021 10:45 pm

Cinque Terre

15.2 K

Cinque Terre

0

ಸಂಬಂಧಿತ ಸುದ್ದಿ