ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೆರೆಕಾಡು ವಿನಾಯಕ ಮೇಳ 'ಯಕ್ಷ ಕಲೋತ್ಸವ'; ಸಾಧಕರಿಗೆ ಗೌರವಾರ್ಪಣೆ

ಮುಲ್ಕಿ: ಗ್ರಾಮೀಣ ಭಾಗದಲ್ಲಿ ಯಕ್ಷಗಾನ ಕಲೆ ಉಳಿಸಿ, ಬೆಳೆಸಿಕೊಂಡು ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಕೆರೆಕಾಡು ವಿನಾಯಕ ಮೇಳದ ಕಾರ್ಯವೈಖರಿ ಶ್ಲಾಘನೀಯ ಎಂದು ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಭಾನುವಾರ ಸಂಜೆ ಎಸ್.ಕೋಡಿ ಬಳಿಯ ರೋಹನ್ ಎಸ್ಟೇಟ್, ಷಣ್ಮುಖ ನಗರದಲ್ಲಿ ಕೆರೆಕಾಡು ವಿನಾಯಕ ಮೇಳದ 12ನೇ ವರ್ಷದ ಯಕ್ಷ ಕಲೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅಭ್ಯಾಗತರಾಗಿ ಮಾಜಿ ಸಚಿವ ಅಭಯಚಂದ್ರ ಮಾತನಾಡಿ, ಕೊರೊನಾ ದಿನಗಳಲ್ಲಿಯೂ ಯಕ್ಷಗಾನ ಉಳಿಸಿ, ಬೆಳೆಸುತ್ತಿರುವ ಸಂಘದ ಕಾರ್ಯ ವೈಖರಿ ಅಭಿನಂದನೀಯ ಎಂದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್, ಪುನರೂರು ದೇವಳದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಎಳತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಕಿನ್ನಿಗೋಳಿ, ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ,ಸದಸ್ಯ ವಿನೋದ್ ಬೊಳ್ಳೂರು, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ನಿಡ್ಡೋಡಿ ಶ್ರೀ ಜ್ಞಾನರತ್ನ ವಿದ್ಯಾ ಸಂಸ್ಥೆ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ ದೇವಸ್ಯ, ಮುಲ್ಕಿ ನ.ಪಂ. ಉಪಾಧ್ಯಕ್ಷ ಸತೀಶ್ ಅಂಚನ್,

ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಉದ್ಯಮಿ ಅಗರಿ ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಶ್ರೀ ವಿನಾಯಕ ಯಕ್ಷ ಕಲೋತ್ಸವದ 2021ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾದ ರಾಜಾರಾಮ್ ಕುಂದಾಪುರ, ಜಿತೇಂದ್ರ ಕೊಟ್ಟಾರಿ, ನರೇಂದ್ರ ಕೆರೆಕಾಡು ಅವರನ್ನು ವಿಶೇಷವಾಗಿ ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು. ಕೆರೆಕಾಡು ವಿನಾಯಕ ಮೇಳದ ಜಯಂತ್ ಅಮೀನ್ ಸ್ವಾಗತಿಸಿದರು. ಶರತ್ ಶೆಟ್ಟಿ ನಿರೂಪಿಸಿದರು. "ಪಿತೃ ಸಂಯೋಗ" ಹಾಗೂ "ಭಕ್ತಿ ಸಂಯೋಗ" ಯಕ್ಷಗಾನ ಪ್ರದರ್ಶನ ನಡೆಯಿತು.

Edited By : Nagesh Gaonkar
Kshetra Samachara

Kshetra Samachara

17/01/2021 09:07 pm

Cinque Terre

21.49 K

Cinque Terre

0

ಸಂಬಂಧಿತ ಸುದ್ದಿ