ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಸೇವಾ ಯುವಕ ವೃಂದ ಭಜನಾ ಮಂಗಲೋತ್ಸವ

ಮೂಲ್ಕಿ: ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಸೇವಾ ಯುವಕ ವೃಂದದ ವಾರ್ಷಿಕ ಭಜನಾ ಮಂಗಲೋತ್ಸವ,ಮೂಡುವಲು ಉತ್ಸವದ ಅಂಗವಾಗಿ ದೇವಳದಲ್ಲಿ ಜರಗಿದ ಏಕಾಹ ಭಜನಾ ಕಾರ್ಯಕ್ರಮದ ಉದ್ಘಾಟನೆಯನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಎನ್ ಎಸ್ ಮನೋಹರ್ ಶೆಟ್ಟಿ,ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು,ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ,ಪ್ರಧಾನ ಅರ್ಚಕ ಕೃಷ್ಣದಾಸ್ ಭಟ್.ಶ್ರೀಪತಿ ಉಪಾಧ್ಯಾಯ,ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ಎಚ್ ಅರವಿಂದ ಪೂಂಜ,ಮೂಲ್ಕಿಯ ಶ್ರೀ ವೆಂಕಟರಮಣ ದೇವಸ್ತಾನದ ಮೊಕ್ತೇಸರ ಅತುಲ್ ಕುಡ್ವ,ಮೂಲ್ಕಿ ಸೀಮೆ ಕಂಬಳ ಸಮಿತಿಯ ಅಧ್ಯಕ್ಷ ರಾಮಚಂದ್ರ ನಾಯಕ್,ಬಿಜೆಪಿಯ ಮೂಡುಬಿದ್ರಿ ಮಂಡಲಾಧ್ಯಕ್ಷ ಸುನೀಲ್ ಆಳ್ವ ,ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಸೇವಾ ಯುವಕ ವೃಂದದ ಅಧ್ಯಕ್ಷ ಕೃಷ್ಣ ಶೆಟ್ಟಿ,ಗೌರವಾಧ್ಯಕ್ಷ ಕೃಷ್ಣ ಶೆಟ್ಟಿ ಮತ್ತಿತರರ ಉಪಸ್ತಿತಿಯಲ್ಲಿ ನೆರವೇರಿಸಲಾಯಿತು.ಈ ಸಂದರ್ಭ ದೇವಳದ ಅರ್ಚಕ ಶ್ರೀಪತಿ ಉಪಾಧ್ಯಾಯ ಮಾತನಾಡಿ ದೇವರ ಆರಾಧನೆ ಮೂಲಕ ಲೋಕದಲ್ಲಿ ಶಾಂತಿ ಮತ್ತು ನೆಮ್ಮದಿ ಸಾಧ್ಯ.

ಎಂದು ಆಶೀರ್ವಚನ ನೀಡಿದರು. ಬಳಿಕ ವಿವಿಧ ಭಜನಾ ಮಂಡಳಿಗಳ ಉಪಸ್ಥಿತಿಯಲ್ಲಿ ಶನಿವಾರ ಸೂರ್ಯೋದಯದಿಂದ ಭಾನುವಾರ ಸೂರ್ಯೋದಯದವರೆಗೆ ಭಜನಾ ಕಾರ್ಯಕ್ರಮ ಮಂಗಲೋತ್ಸವ ಹಾಗೂ ವಿಜೃಂಭಣೆಯಿಂದ ನಡೆಯಿತು.

Edited By : Nagesh Gaonkar
Kshetra Samachara

Kshetra Samachara

16/01/2021 08:38 pm

Cinque Terre

7.33 K

Cinque Terre

0

ಸಂಬಂಧಿತ ಸುದ್ದಿ