ಸುಳ್ಯ: ಸುಳ್ಯದ ಶಾಸಕರಾದ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನಲ್ಲಿ ಹಾಗೂ ಕಡಬದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಹಾಕುವ ಮೂಲಕ ಸಂಭ್ರಮಿಸಿದರು.
ಸುಳ್ಯದಲ್ಲಿ ಹಲವು ಕಡೆ ಎಸ್.ಅಂಗಾರ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ವೀಕ್ಷಣೆಗೆ ದೊಡ್ಡ ಪರದೆಗಳನ್ನು ಅಳವಡಿಸಲಾಗಿತ್ತು. ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆಯೇ ತಾಲೂಕಿನ ನಾನಾ ಕಡೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಖುಷಿ ಪಟ್ಟರು. ಸುಳ್ಯ, ಕಡಬದಲ್ಲಿ ಪಟಾಕಿ ಸಿಡಿಸಿದ ಕಾರ್ಯಕರ್ತರು ನಂತರ ಸ್ವಚ್ಛತೆಯ ಕಡೆಗೂ ಗಮನ ಹರಿಸಿ ಸ್ಥಳ ಶುಚಿಗೊಳಿಸುತ್ತಿರುವ ನೋಟ ಕಂಡು ಬಂತು.
ಸುದೀರ್ಘ ಆರು ಅವಧಿಗಳಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಎಸ್.ಅಂಗಾರ ಅವರು ಶಾಸಕರಾಗಿ ಆಯ್ಕೆಯಾಗುತ್ತಿದ್ದರೂ ಅವರಿಗೆ ಸಚಿವ ಸ್ಥಾನ ಮಾತ್ರ ಮರೀಚಿಕೆಯೇ ಆಗಿತ್ತು.
ಇದೀಗ ಸುಳ್ಯದ "ಬಂಗಾರ" ಎಂಬ ಖ್ಯಾತಿಯ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಇಲ್ಲಿನ ಜನರ ಸಂತೋಷ ಹಿಮ್ಮಡಿಗೊಳಿಸಿದೆ.
Kshetra Samachara
13/01/2021 07:36 pm