ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಜಮಾಡಿ: ಇಂದು ಎಳ್ಳಮವಾಸ್ಯೆ; ಸಹಸ್ರಾರು ಮಂದಿಯಿಂದ ಸಮುದ್ರಸ್ನಾನ

ಮುಲ್ಕಿ: ಎಳ್ಳಮವಾಸ್ಯೆ ಪ್ರಯುಕ್ತ ಮುಲ್ಕಿ ಸಮೀಪದ ಹೆಜಮಾಡಿಯಲ್ಲಿ ಸಹಸ್ರಾರು ಮಂದಿ ಸಮುದ್ರ ಸ್ನಾನ ಮಾಡಿ ಧನ್ಯತಾಭಾವ ಅನುಭವಿಸಿದರು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕಾರ್ಕಳ , ಬೆಳ್ಮಣ್ಣು, ಪಲಿಮಾರು, ಇನ್ನಾ,ಮೂಡಬಿದ್ರೆ,ಕಿನ್ನಿಗೋಳಿ, ಕಟೀಲು,ಹಳೆಯಂಗಡಿ, ಮುಲ್ಕಿ ಮತ್ತಿತರ ಕಡೆಗಳಿಂದ ಸಹಸ್ರಾರು ಮಂದಿ ಪ್ರಾತಃ ಕಾಲ 2 ಗಂಟೆಯಿಂದಲೇ ಸಮುದ್ರ ತೀರಕ್ಕೆ ಬಂದಿದ್ದು ಪಿತೃ ತರ್ಪಣ, ತಿಲಹೋಮ, ಪಿಂಡಪ್ರದಾನ ಇತ್ಯಾದಿ ಧಾರ್ಮಿಕ ವಿಧಿವಿಧಾನ ಪೂರೈಸಿ ಸಮುದ್ರ ಸ್ನಾನ ಗೈದರು.

ಈ ಸಂದರ್ಭ ಪುರೋಹಿತ ಅನಂತರಾಮ ಭಟ್ ಮಾತನಾಡಿ, ಎಳ್ಳಮವಾಸ್ಯೆಯ ಪರ್ವಕಾಲದಲ್ಲಿ ಹಿರಿಯರ ಸದ್ಗತಿಗೆ ಬೇಕಾಗಿ ಹಿಂದಿನ ಕಾಲದಿಂದಲೂ ಪಿತೃ ತರ್ಪಣ ಸಹಿತ ಅನೇಕ ಧಾರ್ಮಿಕ ವಿಧಿವಿಧಾನಗಳನ್ನು ಜನರು ನಡೆಸಿಕೊಂಡು ಬರುತ್ತಿದ್ದು, ಅದರಂತೆ ಈ ದಿನ ಸಹಸ್ರಾರು ಜನರು ಬಂದು ಸಮುದ್ರ ಸ್ನಾನ ಮಾಡಿದ್ದಾರೆ ಎಂದರು.

ವೇದಮೂರ್ತಿ ಹರಿದಾಸ ಭಟ್, ಸೂಡ ಪ್ರಕಾಶ್ ಭಟ್, ಭವಿತ್ ಭಟ್ ಉಚ್ಚಿಲ, ಶ್ರೀನಾಥ್ ಭಟ್ ಹೆಜಮಾಡಿ, ಶ್ರೀಕಾಂತ್ ಭಟ್ ಬಪ್ಪನಾಡು ಧಾರ್ಮಿಕ ವಿಧಿವಿಧಾನಗಳಿಗೆ ನೆರವಾದರು.

Edited By : Manjunath H D
Kshetra Samachara

Kshetra Samachara

13/01/2021 01:51 pm

Cinque Terre

9.26 K

Cinque Terre

0

ಸಂಬಂಧಿತ ಸುದ್ದಿ