ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ವಾರ್ಷಿಕ ಜಾತ್ರೋತ್ರವ ಪ್ರಯುಕ್ತ ಹಾಲುಹಬ್ಬ ಗೆಂಡಸೇವೆ ಹಾಗೂ ತುಲಾಭಾರ ಸೇವಾ ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ಸಂಪನ್ನಗೊಂಡಿತು.
ಶನಿವಾರ ರಾತ್ರಿ ನಡೆದ ಗೆಂಡೋತ್ಸವದಲ್ಲಿ ಸಾವಿರಾರು ಭಕ್ತರು ಶ್ರೀದೇವಿಯ ದರ್ಶನ ಪಡೆದು ಪಾಲ್ಗೊಂಡರು.
ಹಾಗೇ ಭಾನುವಾರ ಪೂರ್ವಾಹ್ನ ಡಕ್ಕೆಬಲಿ,ತುಲಾಭಾರ ಸೇವೆ ಕಾರ್ಯಕ್ರಮದಲ್ಲಿ ನೂರಾರು ಭಕ್ಯರು ಸೇವಾ ಹರಕೆ ಸಂಪನ್ನಗೊಳಿಸಿಕೊಂಡಿತು.
ಕೊರೋನಾ ನಡುವೆ ವಿಜೃಂಭಿಸಿಕೊಂಡ ಜಾತ್ರೋತ್ಸವ
ಕೊರೋನಾ ಮಹಾಕಂಠಕದ ನಡುವೆ ಶ್ರೀದೇವಿ ತನ್ನ ವಾರ್ಷಿಕ ಜಾತ್ರೋತ್ಸವ ಸಾವಿರಾರು ಭಕ್ತರ ಇಷ್ಟಾರ್ಥಗಳನ್ನು ನಿಗಿಸುವಲ್ಲಿ ಸಫಲಳಾದಳು.
ಈ ವರ್ಷದ ಗೆಂಡೋತ್ಸವದಲ್ಲಿ ಅತೀ ಹೆಚ್ಚು ಭಕ್ತಾಧಿಗಳು ಪಾಲ್ಗೊಂಡಿದ್ದು ಮತ್ತೊಂದು ವಿಶೇಷವಾಗಿತ್ತು.ಸ್ವಯಂ ಸೇವಕರಾಗಿ ಪಂಚವರ್ಣ ಯುವಕ ಮಂಡಲ ಕೋಟ,ಮಣೂರು ಫ್ರೆಂಡ್ಸ್, ಗಿಳಿಯಾರು ಯುವಕ ಮಂಡಲ ,ಅಮೃತ ಯುವಕ ಸಂಘ ಕದ್ರಿಕಟ್ಟು ,ಗೀತಾನಂದ ಟ್ರಸ್ಟ್ ಸಮಾಜಕಾರ್ಯ ವಿಭಾಗ,ಲಕ್ಷ್ಮೀ ಸೋಮ ಬಂಗೇರ ಸ.ಪ್ರ ಕಾಲೇಜಿನ ಎನ್.ಎಸ್.ಎಸ್ ವಿಭಾಗದ ವಿದ್ಯಾರ್ಥಿಗಳು,ಕೋಟ ಆರಕ್ಷಕ ಅಧಿಕಾರಿ ,ಸಿಬ್ಬಂದಿಗಳು, ಪಾಲ್ಗೊಂಡು ಕೊರೋನಾ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಸಹಕರಿಸಿದರು.
Kshetra Samachara
11/01/2021 07:49 pm