ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರು ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ವತಿಯಿಂದ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ 9ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಧರ್ಣಪ್ಪ ಸ್ವಾಮಿ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಅವರು, ವಿಶೇಷ ಪ್ರಾರ್ಥನೆ ನಡೆಸಿ ಕೊರೊನಾ ಮಹಾಮಾರಿ ಇಡೀ ಜಗತ್ತಿನಿಂದಲೇ ದೂರವಾಗಿ ಆರೋಗ್ಯ, ಶಾಂತಿ ನೆಲೆಸಲಿ ಎಂದರು.
ದೇವಳದ ಆಡಳಿತಾಧಿಕಾರಿ ಚಂದ್ರ ಪೂಜಾರಿ, ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಶ್ರೀ ಅಯ್ಯಪ್ಪ ಸ್ವಾಮಿ ಪೂಜೆಯ ಅಂಗವಾಗಿ ಶಿಮಂತೂರು ಯುವಕ ಮಂಡಲದ ಸದಸ್ಯರಿಂದ ವಿಶೇಷ ಭಜನೆ ನಡೆಯಿತು.
Kshetra Samachara
09/01/2021 07:30 pm