ಉಡುಪಿ: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಪ್ತಪದಿ ಸರಳ ಉಚಿತ ಸಾಮೂಹಿಕ ವಿವಾಹ ನಡೆಯಿತು. ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ,ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಇವರ ವತಿಯಿಂದ ಸರಳ ವಿವಾಹ ನಡೆಯಿತು.
ಈ ಸರಳ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಭಾಗವಹಿಸಿ ನವ ವಧುವರರಿಗೆ ಸನ್ಮಾನಿಸಿ ಆಶೀರ್ವದಿಸಿದರು, ದೇಶದಾದ್ಯಂತ ಸರಳವಾಗಿ ಮದುವೆ ಸಮಾರಂಭಗಳು ನಡೆಯುತ್ತಿದೆ, ಆಡಂಬರದ ಅದ್ದೂರಿಯ ಕಾರ್ಯಕ್ರಮಗಳಿಂದ ಜನ ಸರಳ ರೂಪಕ್ಕೆ ಇದೀಗ ಹೊಂದಿಕೊಳ್ಳುತ್ತಾರೆ,ಇದು ಉತ್ತಮ ಬೆಳವಣಿಗೆ ಎಂದು ರವಿಶಂಕರ್ ಗುರೂಜಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನವದಂಪತಿಗಳಿಗೆ ಮನಃಪೂರ್ವಕ ಶುಭಹಾರೈಸಿದ ರವಿಶಂಕರ್ ಗುರೂಜಿ ಹೊಸಜೀವನ ಹೊಸ ರೂಪುಗೊಳ್ಳಲಿ ಎಂದು ಹಾರೈಸಿದರು.
Kshetra Samachara
06/01/2021 01:27 pm