ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಿಪಾಡಿ: ಅಂಬೇಡ್ಕರ್ ಯುವಸೇನೆ ಮಧ್ಯ ಗ್ರಾಮ ಶಾಖೆ ಉದ್ಘಾಟನೆ

ಮುಲ್ಕಿ: ಅಂಬೇಡ್ಕರ್ ಯುವಸೇನೆಯ ಕೊಡಿಪಾಡಿಯ ಮಧ್ಯ ಗ್ರಾಮ ಶಾಖೆಯ ಉದ್ಘಾಟನೆ ಮಧ್ಯ ಕೊಡಿಪಾಡಿ ಅಂಬೇಡ್ಕರ್ ಕಾಲೊನಿಯ ಸಮುದಾಯ ಭವನದಲ್ಲಿ ನಡೆಯಿತು.

ಸಮಾರಂಭವನ್ನು ಉದ್ಯಮಿ ಸತೀಶ್ ಮುಂಚೂರು ಹಾಗೂ ಹಿರಿಯ ದಲಿತ ಮಹಿಳೆ ಲಕ್ಷ್ಮಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ದಲಿತರು ಸಮಾಜದಲ್ಲಿ ಮುಂದೆ ಬರಲು ಸಂಘಟನೆಯ ಅಗತ್ಯವಿದ್ದು, ಒಗ್ಗಟ್ಟಾಗಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಎದುರಿಸಬೇಕಾಗಿದೆ ಎಂದರು. ಉಡುಪಿ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಅಂಬೇಡ್ಕರ್ ಯುವಸೇನೆ ಕಾಪು ಶಾಖೆ ಅಧ್ಯಕ್ಷ ಲೋಕೇಶ್ ಪಡುಬಿದ್ರಿ, ಶ್ರೀಪತಿ ಕೆರೆಕಾಡು, ಮಹಿಳಾ ಘಟಕ ಅಧ್ಯಕ್ಷೆ ರಾಜೀವಿ ವಸಂತ, ಕೆರೆಕಾಡು ಗ್ರಾಮ ಶಾಖೆ ಅಧ್ಯಕ್ಷ ಉಮೇಶ್ ಕೆರೆಕಾಡು, ಕೆರೆಕಾಡು ಮಹಿಳಾ ಘಟಕ ಅಧ್ಯಕ್ಷೆ ಚಂದ್ರಿಕಾ ಬೆಳ್ಳಾಯರು, ಮಧ್ಯ ಗ್ರಾಮ ಶಾಖೆ ನೂತನ ಅಧ್ಯಕ್ಷ ದಿನೇಶ್ ಮುಕ್ಕ, ಮಹಿಳಾ ಘಟಕದ ನೂತನ ಅಧ್ಯಕ್ಷೆ ಪಲ್ಲವಿ ಮುಕ್ಕ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

03/01/2021 10:40 pm

Cinque Terre

9.65 K

Cinque Terre

0

ಸಂಬಂಧಿತ ಸುದ್ದಿ