ಮುಲ್ಕಿ: ಮುಲ್ಕಿ ನ.ಪಂ. ವ್ಯಾಪ್ತಿಯಲ್ಲಿ ಸುಮಾರು10.70 ಲಕ್ಷ ರೂ. ಮೊತ್ತದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಅಧ್ಯಕ್ಷ ಸುಭಾಷ್ ಶೆಟ್ಟಿ ಚಾಲನೆ ನೀಡಿದರು.
ಈ ಸಂದರ್ಭ ಅವರು ಮಾತನಾಡಿ, ಮುಲ್ಕಿ ನಪಂ ಆಡಳಿತವು ನಾಗರಿಕರಿಗೆ ಮೂಲ ಸೌಕರ್ಯ ಒದಗಿಸಲು ಬದ್ಧ ಎಂದರು.
ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ, ಪಂಚಾಯಿತಿಯ 15ನೇ ಹಣಕಾಸು ಯೋಜನೆಯಲ್ಲಿ ನಪಂ ವ್ಯಾಪ್ತಿಯ ನಾಲೂರು ಪ್ಲಾಟ್, ನಿಶಿ ಬಾಗ್ ರಸ್ತೆ, ಚಿತ್ರಾಪು ಮುಖ್ಯರಸ್ತೆ ಬಳಿ ಸುಮಾರು 10.70 ಲಕ್ಷದಲ್ಲಿ ಕಾಮಗಾರಿ ನಡೆಯಲಿದೆ.
ಪಂ. ವ್ಯಾಪ್ತಿಯ ನಾಗರಿಕರು ಅಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸಬೇಕು ಎಂದರು. ಮುಲ್ಕಿ ನಪಂ ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಹರ್ಷರಾಜ ಶೆಟ್ಟಿ, ಯೋಗೀಶ್ ಕೋಟ್ಯಾನ್, ರಾಧಿಕಾ ಕೋಟ್ಯಾನ್, ಶೈಲೇಶ್ ಕುಮಾರ್, ಹರಿಶ್ಚಂದ್ರ, ಇಂಜಿನಿಯರ್ ಆರತಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/01/2021 01:02 pm