ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ಹುಣ್ಣಿಮೆ ಪ್ರಯುಕ್ತ ರಥೋತ್ಸವ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ
ಸಂಪನ್ನಗೊಂಡಿತು.
ಬೆಳಗ್ಗೆ ದೇವರಿಗೆ ಸೀಯಾಳ ಅಭಿಷೇಕ, ಕನಕಾಭಿಷೇಕ, ಗಂಗಾ ಭಾಗೀರಥಿ ಅಭಿಷೇಕ ನಡೆಯಿತು. ರಾತ್ರಿ ಪೂಜೆ, ದೀಪಾರಾಧನೆ ನಡೆದ ಬಳಿಕ ದೇವಳದಲ್ಲಿ ಸಂಭ್ರಮದ ರಥೋತ್ಸವ ನಡೆಯಿತು.
ಬಳಿಕ ದೇವರ ವಿಶ್ರಾಂತಿ ಪೂಜೆ, ಸ್ವರ್ಣ ಗರುಡ ಸಹಿತ ರಜತ ರಥ ಉತ್ಸವ, ದೇವ ದರ್ಶನದಲ್ಲಿ ಅಭಯ ಪ್ರಸಾದ, ನಿತ್ಯೋತ್ಸವ, ಚಂದ್ರಮಂಡಲ ಉತ್ಸವ, ವಸಂತ ಪೂಜೆಯೊಂದಿಗೆ ಪ್ರತಿಷ್ಠಾ ಮಹೋತ್ಸವ ಸಂಪನ್ನಗೊಂಡಿತು.
ಮಹೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದು, ಕೊರೊನಾದಿಂದಾಗಿ ದೇವಳದ ವತಿಯಿಂದ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಸ್ವಯಂಸೇವಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಕೊಳ್ಳುವಂತೆ ಭಕ್ತರಿಗೆ ಸೂಚನೆ ನೀಡುತ್ತಿದ್ದರು ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಬಾರಿಯ ಜಾತ್ರೆಯಲ್ಲಿ ಸಂತೆ ನಿಷೇಧಿಸಲಾಗಿತ್ತು.
Kshetra Samachara
31/12/2020 10:10 am