ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ವಿಶ್ವ ಹೃದಯ ದಿನ ವಿಶೇಷ; ಜಾಗೃತಿಗೆ ವಿಶಿಷ್ಟ ಕಲಾಕೃತಿ ಅನಾವರಣ

ಮಣಿಪಾಲ: ವಿಶ್ವ ಹೃದಯ ದಿನದ ಪ್ರಯುಕ್ತ ಸಮುದಾಯ ವೈದ್ಯಕೀಯ ವಿಭಾಗ ,ಕೆ.ಎಂ.ಸಿ. ಮಣಿಪಾಲ ಸಹಭಾಗಿತ್ವದಲ್ಲಿ ಕಲಾವಿದ ಶ್ರೀನಾಥ್ ಮಣಿಪಾಲ ರಚಿಸಿದ ಹೃದಯ ಜಾಗೃತಿ ಕಲಾಕೃತಿಯನ್ನು ಸಮುದಾಯ ವೈದ್ಯಕೀಯ ವಿಭಾಗದ ಡಾ.ಪವನ್ ಕುಮಾರ್ ಅನಾವರಣಗೊಳಿಸಿದರು.

ಕಲಾಕೃತಿಯಲ್ಲಿ ಹೃದಯಕ್ಕೆ ಬೇಕಾದ ಆರೋಗ್ಯಪೂರ್ಣ ಆಹಾರ ಪದ್ಧತಿ ಮತ್ತು ಮುಖ್ಯ ಆಹಾರಗಳನ್ನು ಬಿಂಬಿಸಲಾಗಿದೆ. ಅದರ ಜೊತೆಗೆ ವ್ಯಾಯಾಮ‌ ಮತ್ತು ಯೋಗದಿಂದ ಹೃದಯಕ್ಕೆ ಆಗುವ ಪ್ರಯೋಜನ ಮತ್ತು ಲಾಭಗಳನ್ನೂ‌ ಕಲಾಕೃತಿಯಲ್ಲಿ ಸುಂದರವಾಗಿ, ಕ್ರಿಯೇಟಿವ್ ಆಗಿ ಬಿಂಬಿಸಲಾಗಿದೆ. ಇದರೊಂದಿಗೆ ಹೃದಯದ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಭಿತ್ತಿ ಪತ್ರವನ್ನೂ‌ ಪ್ರದರ್ಶಿಸಲಾಗಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಕಲಾಕೃತಿಯು ಮಣಿಪಾಲದ ಗ್ರೀನ್ಸ್ ನಲ್ಲಿ ಒಂದು ವಾರ ಪ್ರದರ್ಶನಕ್ಕೆ ಇರಲಿದ್ದು, ಆಬಾಲ ವೃದ್ಧರಾದಿಯಾಗಿ ಎಲ್ಲರೂ ಈ ಅಪೂರ್ವ ಕಲಾಕೃತಿಗೆ ಮನಸೋತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

30/09/2020 03:56 pm

Cinque Terre

19.29 K

Cinque Terre

0

ಸಂಬಂಧಿತ ಸುದ್ದಿ