ಮಲ್ಪೆ: ಪ್ರಸಿದ್ಧ ಮಲ್ಪೆ ಬೀಚ್ ನಲ್ಲಿಂದು ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಪ್ರವಾಸೋದ್ಯಮ ದಿನ ಆಚರಿಸಲಾಯಿತು.
ಮಳೆಗಾಲದ ಕೊನೆಗೆ ಸಮುದ್ರಕ್ಜೆ ಎಸೆದ ಪ್ಲಾಸ್ಟಿಕ್ ಬಾಟಲಿ, ತ್ಯಾಜ್ಯ ದಡಕ್ಕೆ ಬಂದು ಜಮೆಯಾಗಿ ಬೀಚ್ ಸಾಕಷ್ಟು ಕಸಮಯವಾಗಿರುತ್ತದೆ. ಹೀಗಾಗಿ ಇಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮತ್ತು ಅಧಿಕಾರಿ ವರ್ಗ ಬೀಚ್ ಸ್ವಚ್ಛತೆಯಲ್ಲಿ ಪಾಲ್ಗೊಂಡರು.
ಉಡುಪಿಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಬೀಚ್ ನಲ್ಲಿದ್ದ ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಿದರು. ಕೊರೊನಾ ಕಾರಣದಿಂದ ಬಿಕೋ ಎನ್ನುತ್ತಿದ್ದ ಮಲ್ಪೆಯ ಬೀಚ್ ಇದೀಗ ಹೊಸ ಕಳೆಯೊಂದಿಗೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
Kshetra Samachara
27/09/2020 02:10 pm