ಉಡುಪಿ: ಕಾಪು ಜೇಸಿಐ ಸಂಸ್ಥೆಯ ಜೇಸಿ ಸಪ್ತಾಹ ಸಮಾರೋಪ: ಕೊರೊನಾ ವಾರಿಯರ್ಸ್ ಗೆ ಸನ್ಮಾನ

ಕಾಪು: ಕಾಪು ಜೇಸಿಐ ಭವನದಲ್ಲಿ ಕಾಪು ಜೇಸಿಐ ಸಂಸ್ಥೆ ವತಿಯಿಂದ ಜೇಸಿ ಸಪ್ತಾಹದ ಸಮಾರೋಪ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾಪುವಿನ ಹಿರಿಯ ಆಶಾ ಕಾರ್ಯಕರ್ತೆಯರನ್ನು ಹಾಗೂ ಪ್ರಾ.ಆ. ಕೇಂದ್ರ ವೈದ್ಯಾಧಿಕಾರಿ ಡಾ.ಸುಬ್ಬಣ್ಣ ಕಾಮತ್ ಹಾಗೂ ಪ್ರಸೂತಿ ತಜ್ಞೆ ಡಾ.ಪ್ರಜ್ಞಾ ಮೊಗಸಾಲೆ ಅವರನ್ನು ಸನ್ಮಾನಿಸಲಾಯಿತು.

ಕೃಷ್ಣ ವೇಷ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಲಿಕೆಯಲ್ಲಿ ಉನ್ನತ ಅಂಕ ಪಡೆದ ಜೇಸಿಐ ಸಂಸ್ಥೆಯ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಾಪು ಜೇಸಿಐ ಮಾಜಿ ಅಧ್ಯಕ್ಷೆ ಶಾರದೇಶ್ವರಿ ಗುರ್ಮೆಯವರಿಗೆ ಕಮಲ ಪತ್ರ ನೀಡಿ ಸನ್ಮಾನಿಸಲಾಯಿತು.

ಕೊರೊನಾ ವಾರಿಯರ್ ಗಳನ್ನು ಕಾಪು ಜೇಸಿಐ ಸಂಸ್ಥೆ ಸನ್ಮಾನಿಸಿದಾಗ ಜೇಸಿ ಸಪ್ತಾಹಕ್ಕೆ ಸಾರ್ಥಕ್ಯ ಲಭಿಸಿದೆ ಎಂದು ಹಿರಿಯ ಜೇಸಿ ವೈ. ಸುಕುಮಾರ್ ಹೇಳಿದರು. ಅವರು ಜೇಸಿ ಸಪ್ತಾಹದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ನಾವು ಅತಿ ಕಷ್ಟಕರ ಸನ್ನಿವೇಶದಲ್ಲಿದ್ದು, ಆಶಾ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ ತಮ್ಮ ಕುಟುಂಬದ ಸಂತೋಷ ಬದಿಗಿಟ್ಟು ಸಮಾಜದ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಸಮಾಜ ಋಣಿಯಾಗಿದೆ. ಅದರಲ್ಲಿಯೂ ಕೊರೊನಾ ವಾರಿಯರ್ ಗಳಿಗೆ ಸನ್ಮಾನ ಸಂತಸದ ಸಂಗತಿ. ಈ ಬಾರಿ ಅತ್ಯಂತ ಸರಳ ರೀತಿಯಲ್ಲಿ ಜೇಸಿಐ ಸಪ್ತಾಹ ಆಯೋಜಿಸಲಾಗಿದೆ ಎಂದರು.

ಕಾಪು ಜೇಸಿಐ ಅಧ್ಯಕ್ಷ ವಿನೋದ್ ಕಾಂಚನ್, ಕಾರ್ಯದರ್ಶಿ ಸಂತೋಷ್ ಕಾಪು, ಉದ್ಯಮಿ ಪ್ರಭಾಕರ ಪೂಜಾರಿ, ರಾಕೇಶ್ ಕುಂಜೂರು, ಶಾರದೇಶ್ವರಿ ಗುರ್ಮೆ, ಶಶಿಧರ ಸುವರ್ಣ, ರಮೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Kshetra Samachara

Kshetra Samachara

12 days ago

Cinque Terre

6.61 K

Cinque Terre

0