ಉಡುಪಿ: ಗಾಂಧಿ ಜಯಂತಿಯನ್ನು ಉಡುಪಿಯ ಅಂಬಾಗಿಲು ರಿಕ್ಷಾ ಚಾಲಕರು- ಮಾಲಕರು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಅಂಬಾಗಿಲು ರಾಷ್ಟ್ರೀಯ ಹೆದ್ದಾರಿ ಸಮೀಪದ ಬಸ್ಸು ಕಾಯುವ ಪ್ರಯಾಣಿಕರಿಗೆ ತಂಗುದಾಣ ನಿರ್ಮಾಣ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಲ್ಲದೆ, ರಿಕ್ಷಾ ನಿಲ್ದಾಣದ ಧ್ವಜಸ್ತಂಭ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಯಶೋದಾ ರಿಕ್ಷಾ ಯೂನಿಯನ್ ಅಧ್ಯಕ್ಷ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಉದ್ಘಾಟಿಸಿದರು. ಪ್ರಯಾಣಿಕರ ತಂಗುದಾಣವನ್ನು ಉದ್ಯಮಿ ನೀಲೇಶ್ ಉದ್ಘಾಟಿಸಿದರು.
ಕೃಷ್ಣಮೂರ್ತಿ ಆಚಾರ್ಯ ಮಾತನಾಡಿ, ಸ್ವಚ್ಛ ಭಾರತ ಕಲ್ಪನೆ ಗಾಂಧಿ ಅವರ ಕಾಲದಲ್ಲಿತ್ತು. ಆದರೆ, ಅದು ಕೇವಲ ಮನೆ ಮತ್ತು ಪರಿಸರ ಸ್ವಚ್ಛತೆ ಮಾತ್ರವಲ್ಲದೆ, ಮಾನವನಲ್ಲಿರುವ ಗುಣ ಮತ್ತು ಬುದ್ಧಿಯ ಸ್ವಚ್ಛತೆ ಕೂಡ ಆಗಿತ್ತು. ಆದ್ದರಿಂದ ಗಾಂಧಿ ಜಯಂತಿ ಸಂದರ್ಭ ನಾವು ನಮ್ಮ ಸುತ್ತಮುತ್ತ ಮತ್ತು ನಮ್ಮಲ್ಲಿರುವ ಕೊಳಚೆ ನಿವಾರಿಸಬೇಕು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್, ಮಾಜಿ ಸದಸ್ಯ ಶೋಭಾ ಸುರೇಶ್, ಜಿಲ್ಲಾಧ್ಯಕ್ಷ ಗೋಪಾಲ್ ಪೂಜಾರಿ, ಗೌರವಾಧ್ಯಕ್ಷ ಕೆ.ಪಿ. ಪೂಜಾರಿ, ನಗರಸಭೆ ಸದಸ್ಯೆ ಜಯಂತಿ ಕೆ, ಪೂಜಾರಿ ಉಪಸ್ಥಿತರಿದ್ದರು.
Kshetra Samachara
02/10/2020 06:06 pm