ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ 2006 ರಲ್ಲಿ ನಡೆದ ಚಂಪಾ ಷಷ್ಠಿ ಮಹೋತ್ಸವದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಡೆಸಿದ ಸಂಗೀತ ಕಾರ್ಯಕ್ರಮವನ್ನು ಇಂದಿಗೂ ಹಲವರು ನೆನಪಿಸಿಕೊಳ್ಳುತ್ತಿದ್ದಾರೆ.
ಅಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸ್ವರ ಸಾಮ್ರಾಟ ಎಸ್ .ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಸಂಗಡಿಗರು ಸುಮಾರು ಮೂರು ಗಂಟೆವರೆಗೆ ಸಂಗೀತ ಸುಧೆ ಹರಿಸಿದ್ದರು.
ಈ ಸಂದರ್ಭ ಅವರನ್ನು ಸುಳ್ಯ ಕೆ.ವಿ.ಜಿ. ಶಿಕ್ಷಣ ಸಂಸ್ಥೆಗಳ ಪರವಾಗಿ ಡಾ.ಕೆ.ವಿ. ರೇಣುಕಾಪ್ರಸಾದ್ ಗೌರವಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ನಡೆದ ಈ "ಸಂಗೀತ ಸಾಂಸ್ಕೃತಿಕ ಲೋಕ ವೈಭವ" ವನ್ನು ಇಂದಿಗೂ ಇಲ್ಲಿನ ಹಿರಿಯರು ಸ್ಮರಿಸುತ್ತಾರೆ.
ಎಸ್.ಪಿ.ಬಿ ಜೊತೆ ಅವರ ಸಹೋದರಿ ಎಸ್ ಪಿ ಶೈಲಜಾ ಭಾಗವಹಿಸಿದ್ದರು ಹಾಗೂ ಸುಬ್ರಹ್ಮಣ್ಯದ ಸುರೇಖಾ ಕೆ. ಎಸ್. ಅವರು ಸಾಥ್ ನೀಡಿದ್ದರು.
Kshetra Samachara
25/09/2020 09:03 pm