ಉಡುಪಿ: ವಿಶ್ವಾದ್ಯಂತ ಶ್ರೀಕೃಷ್ಣಭಕ್ತಿ ಪ್ರಸಾರ ಮಾಡುತ್ತಾ ಇದೀಗ ಪರ್ಯಾಯ ಸಂಚಾರದಲ್ಲಿರುವ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರನ್ನು ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿರುವ ಪ್ರಸಿದ್ಧ ಶ್ರೀ ಶಿವ ವಿಷ್ಣು ದೇವಸ್ಥಾನಕ್ಕೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭ ಪರ್ಯಾಯಪೀಠ ಆರೋಹಣ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು.
ಸ್ವಾಮೀಜಿಯವರು ಈ ಸಂದರ್ಭದಲ್ಲಿ ಆಧುನಿಕ ಜೀವನದಲ್ಲಿ ಭಗವದ್ಗೀತೆ ಎನ್ನುವ ವಿಷಯದ ಮೇಲೆ ಅತ್ಯುತ್ತಮ ರೀತಿಯಲ್ಲಿ ಜನರ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ ಮಾತನಾಡಿದರು. ಜೀವನದಲ್ಲಿನ ಉದಾಹರಣೆಗಳ ಮೂಲಕ ಭಗವದ್ಗೀತೆಯ ತತ್ವವನ್ನು ಮನಮುಟ್ಟುವಂತೆ ತಿಳಿಸಿದರು. ಅದಾದ ಮೇಲೆ ಸುಮಾರು 100 ಜನರು ಭಗವದ್ಗೀತೆ ಲೇಖನ ಯಜ್ಞದ ಸಂಕಲ್ಪ ತೆಗೆದುಕೊಂಡರು. ಕಾರ್ಯಕ್ರಮದ ಪ್ರಾಯೋಜಕರಾದ ವಾಸುದೇವ ಮೂರ್ತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
Kshetra Samachara
13/10/2022 07:02 pm