ಕಾರ್ಕಳ: ಕನ್ನಡಿ ಶ್ರೀ ಜಲದುರ್ಗಾ ದೇವಸ್ಥಾನದ ಸಭಾಂಗಣದಲ್ಲಿ 'ಹೆಜ್ಜೆ' ಕಲಾ ಬಳಗ ಜಾರ್ಕಳ ಮುಂಡ್ಲಿ ಇವರಿಂದ 'ಒಕ್ಕಲ ಒನಪು' ಎನ್ನುವ ಸುಗ್ಗಿ ಕುಣಿತ ಸಂಪನ್ನಗೊಂಡಿತು. ಅಪ್ಪಟ ದೇಸೀ ಸೊಗಡಿನ ಈ ನೃತ್ಯವನ್ನು ನೂರಾರು ಗ್ರಾಮಸ್ಥರು ಕಣ್ತುಂಬಿಕೊಂಡರು.
ಕೃಷಿ ಪ್ರಧಾನವಾದ ನಮ್ಮ ನೆಲದಲ್ಲಿ ಫಸಲು ಕಟಾವಿಗೆ ಬರುತ್ತಲೇ ರೈತಾಪಿಗಳ ಮನ ಮುಗಿಲು, ಮನೆಗಳಲ್ಲಿ ಸಂತಸದ ನಗೆ ನವಿಲು! ವರ್ಷದ ಕೂಳು, ಕಾಳು ಕಣಕ್ಕೆ ಬರುತ್ತಲೇ ಒಕ್ಕಲುತನದ ಹೆಮ್ಮಕ್ಕಳ ಸಂಭ್ರಮದ ಸೆರಗಿಗೆ ನೂರು ಬಣ್ಣಗಳ ಕಸೂತಿ! ರವಿಕೆ ಕಣದ ಅಂಚಿಗೆ ಹುಲ್ಲು ಬಣವೆಯ ಚಿತ್ತಾರ! ಹೆರಳ ತುದಿಗೆ ಜೋಳದ ಗೊಂಡೆ! ಅಂಗೈ ತುಂಬಾ ಖುಷಿಯ ಮದರಂಗಿ! ಗೆಜ್ಜೆಯ ಲಾಸ್ಯದಲ್ಲಿ ವರ್ಷದ ಹರ್ಷ! ಸುಗ್ಗಿ ಅಂದ್ರೆ ಸುಮ್ಮನೇನಾ? ಹಾಡು-ಹಸೆ-ನಲಿತ-ಕುಣಿತ! ನಮ್ಮ ಅನ್ನದಾತರ ಶ್ರಮಸಂಸ್ಕೃತಿಯ ಪ್ರತೀಕದಂತಿತ್ತು ಈ ಅಪೂರ್ವ ನೃತ್ಯ.
PublicNext
06/10/2022 08:49 pm