ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಿಜಯದಶಮಿ ಸಂಗೀತೋತ್ಸವಕ್ಕೆ ಕೃಷ್ಣನಗರಿ ಜನರು ಫಿದಾ!

ಉಡುಪಿ: ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ಆಶ್ರಯದಲ್ಲಿ ವಿಜಯದಶಮಿ ಸಂಗೀತೋತ್ಸವ ವೈಭವದಿಂದ ನಡೆಯಿತು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಒಂದು ದಿನದ ಈ ಮಹೋತ್ಸವವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು. ಬಳಿಕ ಕಾರ್ಕಳದ ಅನಂತಪದ್ಮನಾಭ ಭಟ್ ಇವರಿಂದ ಶ್ರೀ ವಾದಿರಾಜರ ಕುರಿತ ಹರಿಕಥೆ ನಡೆಯಿತು. ಪುಟ್ಟ ಮಕ್ಕಳಿಂದ ಪಿಳ್ಳಾರಿ ಗೀತೆಗಳು ಮತ್ತು ದೇವಿಯ ಕೃತಿಗಳು ಹಾಡಲ್ಪಟ್ಟವು.

ಬಳಿಕ ಅನುಶ್ರೀ ಮಳಿ ಇವರಿಂದ ಲಕ್ಷ್ಮಿ ಅಯ್ಯಂಗಾರ್ ಸಂಸ್ಮರಣಾರ್ಥ ಸಂಗೀತ ಕಚೇರಿ ನಡೆಯಿತು. ಇದೇ ವೇಳೆ ವೈದಿಕರು ವೇದಘೋಷ ಮತ್ತು ಸರಸ್ವತಿ ಪೂಜೆ ನಡೆಸಿಕೊಟ್ಟರು.

ಕಲಾವಿಹಾರಿ ಎ.ಈಶ್ವರಯ್ಯ ಅವರ ಸ್ಮರಣಾರ್ಥ ಸಾರಡ್ಕದ ಗೀತಾ ಅವರ ಸಂಗೀತ ಕಚೇರಿ, ವಿವಿಧ ಕಲಾವಿದರಿಂದ ಪಂಚರತ್ನ ಗೋಷ್ಠಿ ಗಾಯನ ಮತ್ತು ನವಾವರಣ ಕೃತಿಗಳ ಗಾಯನ ನಡೆಯಿತು.

Edited By :
Kshetra Samachara

Kshetra Samachara

05/10/2022 08:31 pm

Cinque Terre

4.49 K

Cinque Terre

0

ಸಂಬಂಧಿತ ಸುದ್ದಿ