ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಶ್ರೀ ಶಾರದಾ ಮಾತೆ ವಿಸರ್ಜನಾ ಶೋಭಾ ಯಾತ್ರೆ; ಸ್ತಬ್ಧಚಿತ್ರ ವೈಭವ, ಜಲಸ್ತಂಭನ

ಬಜಪೆ ಶ್ರೀ ಶಾರದೋತ್ಸವ ಸಮಿತಿಯ 30ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ.2ರಂದು ಇಲ್ಲಿನ ಕೇಂದ್ರ ಮೈದಾನದ ಬಳಿಯ ಶ್ರೀ ಶಕ್ತಿ ಮಂಟಪದಲ್ಲಿ ಆರಂಭಗೊಂಡಿದ್ದು, ನಿನ್ನೆ ರಾತ್ರಿ ಶ್ರೀ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ವೈಭವಯುತವಾಗಿ ಜರುಗಿತು.

ಚೆಂಡೆ, ವಿವಿಧ ಭಜನಾ ತಂಡಗಳಿಂದ ಭಜನೆ, ನಾನಾ ಟ್ಯಾಬ್ಲೋಗಳು ನೆರೆದಿದ್ದ ಜನರ ಕಣ್ಮನ ಸೆಳೆಯಿತು. ಬಜಪೆಯಿಂದ ಸಾಗಿದ ಶೋಭಾಯಾತ್ರೆ ಮರವೂರು ತನಕ ಸಾಗಿ ನಂತರ ಮರವೂರಿನ ಫಲ್ಗುಣಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

ಈ ಸಂದರ್ಭ ಮೂಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಭುಜಂಗ ಕುಲಾಲ್ ಮತ್ತಿತರರು ಹಾಜರಿದ್ದರು.

Edited By : Manjunath H D
PublicNext

PublicNext

05/10/2022 01:45 pm

Cinque Terre

33.23 K

Cinque Terre

0

ಸಂಬಂಧಿತ ಸುದ್ದಿ