ಮಂಗಳೂರು: ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಪ್ರಸಿದ್ಧ ಮಂಗಳೂರು ದಸರಾಕ್ಕೆ ಸೋಮವಾರ ಅದ್ಧೂರಿ ಚಾಲನೆ ದೊರಕಿತು. ಶ್ರೀ ಮಹಾಗಣಪತಿ, ನವದುರ್ಗೆಯರ ಸಹಿತ ಶ್ರೀಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಎಲ್ಲರ ನಿರೀಕ್ಷೆಯ ಮಂಗಳೂರು ದಸರಾ ಪ್ರಾರಂಭಗೊಂಡಿತು.
ಕೇಂದ್ರದ ಮಾಜಿ ಸಚಿವ, ಕುದ್ರೋಳಿಯ ಶ್ರೀಕ್ಷೇತ್ರದ ಅಭಿವೃದ್ಧಿ ರೂವಾರಿ ಜನಾರ್ದನ ಪೂಜಾರಿಯವರು ಮಂಗಳೂರು ದಸರಾಕ್ಕೆ ಚಾಲನೆ ನೀಡಿದರು. ಈ ವೇಳೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾಗಿ ಶ್ರೀಶಾರದಾ ಮಾತೆ ಸಹಿತ ನವದುರ್ಗೆಯರು, ಶ್ರೀಮಹಾಗಣಪತಿಯ ದರ್ಶನ ಪಡೆದು ಪುಳಕಿತರಾದರು.
ಇಂದಿನಿಂದ ಮೊದಲ್ಗೊಂಡು ಮಂಗಳೂರು ದಸರಾ ಸಮಾರಂಭವು ಅಕ್ಟೋಬರ್ 6ರಂದು ಸಂಪನ್ನವಾಗಲಿದೆ. ಅಕ್ಟೋಬರ್ 5ರ ಸಂಜೆ 4ಗಂಟೆಗೆ ವಿಸರ್ಜನಾ ಪೂಜೆ ನೆರವೇರಿ ಬಳಿಕ ರಾತ್ರಿ ಪೂರ್ತಿ ಮಂಗಳೂರಿನ ರಾಜಬೀದಿಗಳಲ್ಲಿ ವೈಭವದ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಬಳಿಕ ಶ್ರೀಶಾರದಾ ಮಾತೆ ಸಹಿತ ನವದುರ್ಗೆಯರು, ಶ್ರೀಮಹಾಗಣಪತಿಯ ಮೂರ್ತಿಯನ್ನು ಶ್ರೀಕ್ಷೇತ್ರ ಕುದ್ರೋಳಿಯ ಕೆರೆಯಲ್ಲಿ ವಿಸರ್ಜನೆ ಮಾಡುವುದರೊಂದಿಗೆ ಸಂಪನ್ನಗೊಳ್ಳಲಿದೆ.
PublicNext
26/09/2022 07:31 pm