ಬ್ರಹ್ಮಾವರ: ಉಡುಪಿ ಜಿಲ್ಲೆಯ ಕೋಟದ ಹಲವು ಮಕ್ಕಳತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸ ಮತ್ತು ಶುಕ್ರವಾರ ಈ ದೇವಸ್ಥಾನಕ್ಕೆ ಬಂದು ಸೇವೆ ಸಲ್ಲಿಸಿದ ಮುತ್ತೈದೆಯರು ಇಲ್ಲಿ ಬಳೆ ತೊಡಿಸಿಕೊಂಡರೆ ಭಾಗ್ಯಗಳು ಹೆಚ್ಚುತ್ತದೆ ಎನ್ನುವ ನಂಬಿಕೆ ಇಲ್ಲಿದೆ.
ದೇವಸ್ಥಾನದ ಒಳ ಆವರಣದಲ್ಲಿ ಸುತ್ತಲೂ ಇರುವ ಉದ್ಬವ ಲಿಂಗಗಳಿಗೆ ಎಣ್ಣೆ ಸೇವೆ ನೀಡಿದಲ್ಲಿ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಕೂಡಾ ಇದೆ. ನಾಥಪಂಥದ ಜೋಗಿಜನಾಂಗದ ಬಳೆಗಾರರು ಇಲ್ಲಿನ ಅರ್ಚಕರು. ಈ ದೇವಸ್ಥಾನದ ಸುತ್ತಲೂ ಬಳೆಗಳದ್ದೆ ಅಂಗಡಿಗಳು. ಬಳೆ ತೊಡಿಸಿಕೊಂಡ ಬಳಿಕ ಬಳೆಗಳಿಗೆ ನಮಸ್ಕರಿಸುವ ಸಂಪ್ರದಾಯ ಕೂಡ ಇದೆ.
Kshetra Samachara
21/09/2022 08:30 pm