ಮಂಗಳೂರು: ಕರಾವಳಿಯಲ್ಲಿ ಈ ಬಾರಿಯ ಗಣೇಶೋತ್ಸವ ಅಚರಣೆ ಸಂಪನ್ನಗೊಂಡಿದೆ. ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಹಿಂದೂ ಯುವ ಸೇನೆ ಅಶ್ರಯದಲ್ಲಿ ನಡೆದ 30 ನೇ ವರ್ಷದ ಗಣೇಶೋತ್ಸವ ವಿಸರ್ಜನೆ ಶೋಭಾಯಾತ್ರೆ ಮೆರವಣಿಗೆ ನಡೆಯಿತು.
ಏಳು ದಿನಗಳ ಕಾಲ ಮಹಾಗಣಪತಿ ದೇವರಿಗೆ ಪೂಜಾ ಕಾರ್ಯಗಲು ನಡೆದವು. ನಿನ್ನೆ ರಾತ್ರಿ ವಿಸರ್ಜನೆ ಪೂಜೆ ನೇರೆವೇರಿದ ಬಳಿಕ ಶೋಭಾಯಾತ್ರೆ ಅರಂಭವಾಗಿ ನಗರದ ಹಂಪನ್ ಕಟ್ಟೆ, ಕೆ.ಎಸ್ ರಾವ್ ರಸ್ತೆ, ನವಭಾರತ್ ಸರ್ಕಲ್ ಅಗಿ ಕಾರ್ ಸ್ಟ್ರೀಟ್‌ನ ಮಹಮ್ಮಾಯಿ ಕೆರೆಯಲ್ಲಿ ಶ್ರೀ ದೇವರ ಜಲಸ್ತಂಭನ ನಡೆಯಿತು. ಶೋಭಾಯಾತ್ರೆ ಮೆರವಣಿಗೆಯಲ್ಲಿ ಚೆಂಡೆ, ಭಜನೆ ಕುಣಿತ, ಸ್ತಬ್ಧ ಚಿತ್ರಗಳು ಭಾಗವಹಿಸಿದ್ದವು.ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಗಣೇಶ ಭವ್ಯ ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು.
Kshetra Samachara
07/09/2022 02:30 pm