ಮಂಗಳೂರು: ಬಿಲ್ಲವ ಸಮಾಜವನ್ನು ಸಂಘಟನೆ ಮಾಡುವುದು ಇಂದಿನ ಸವಾಲಾಗಿದೆ. ಇಂತಹ ಸಂಕಷ್ಟವನ್ನು ನಿವಾರಣೆ ಮಾಡುವ ಶಕ್ತಿಯನ್ನು ಖಂಡಿತಾ ದೇವರು ನೀಡುತ್ತಾನೆ. ಮಂಗಳೂರು ತಾಲೂಕು ಬಿಲ್ಲವ ಸಂಘದ ಉದ್ಘಾಟನೆ ಹಾಗೂ ಸಮಾಜದ ಒಗ್ಗಟ್ಟಿನ ಚಿಂತನೆ ಭಾರೀ ಉತ್ತಮ ಕಾರ್ಯವೆಂದು ಮಾಜಿ ಕೇಂದ್ರ ಸಚಿವ, ಬಿಲ್ಲವ ಸಮುದಾಯದ ಮುಖಂಡ ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೊರಗಪ್ಪ ಸ್ಮಾರಕ ಸಭಾಭವನದಲ್ಲಿ ಭಾನುವಾರ ಮಂಗಳೂರು ತಾಲೂಕು ಬಿಲ್ಲವ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವರ ಬಗ್ಗೆ ಭಯ-ಭಕ್ತಿಯಿದ್ದು, ನಾವು ನುಡಿದಂತೆ ನಡೆದರೆ ಯಶಸ್ಸು ಖಂಡಿತಾ ಸಾಧ್ಯ ಎಂದರು.
ಬಿಲ್ಲವ ಮುಖಂಡ, ರಾಜ್ಯ ಕಿಯೋನಿಕ್ಸ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ, ದೇವರು ಜಾತಿಯನ್ನು ಸೃಷ್ಟಿಸಿಲ್ಲ. ಜ್ಞಾನ, ಸಾಧನೆ, ಪ್ರತಿಭೆಗಳೇ ಜಾತಿಯಾಗಬೇಕು. ಜ್ಞಾನ ಇದ್ದಲ್ಲಿ ಸಾಧನೆ ಸಾಧ್ಯ. ಹೊಸ ಜಗತ್ತಿನಲ್ಲಿ ಯಶಸ್ಸಿಗೆ ಬೇಕಾದ ವಿಚಾರಧಾರೆಯನ್ನು ಯುವಸಮುದಾಯಕ್ಕೆ ನೀಡಬೇಕು. ರಾಷ್ಟ್ರದ ಪರಿಕಲ್ಪನೆ ಮೂಡಿಸಬೇಕು ಎಂದು ಹೇಳಿದರು.
Kshetra Samachara
04/09/2022 10:15 pm