ಕುಂದಾಪುರ: ಕುಂದಾಪುರ ತಾಲೂಕು ಆಡಳಿತದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಶುಕ್ರವಾರ ಮಿನಿವಿಧಾನಸೌಧದಲ್ಲಿ ವಿಜೃಂಭಣೆಯಿಂದ ಜರುಗಿತು
ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ತಹಶಿಲ್ದಾರ್ ಕಿರಣ್ ಗೌರಯ್ಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪುಷ್ಪ ಹಾಗೂ ವಿದ್ಯುತ್ ಅಲಂಕೃತವಾದ ಮಂಟಪದಲ್ಲಿ ಶ್ರೀಕೃಷ್ಣನ ಪೋಟೋವಿರಿಸಿ ಅರ್ಚಕರಾದ ಪ್ರಕಾಶ್ ನಾವಡ ನೇತೃತ್ವದಲ್ಲಿ ಪೂಜಾವಿಧಿ ನೆರವೇರಿಸಲಾಯಿತು. ಪೂಜೆ ಬಳಿಕ ಲಡ್ಡು, ಪಾಯಸ, ಪ್ರಸಾದ ವಿತರಣೆ ನಡೆಯಿತು.
ಕುಂದಾಪುರ ತಾಲೂಕು ಗೊಲ್ಲ ಯಾದವ ಸಮಾಜ ಸಂಘದ ಅಧ್ಯಕ್ಷ ರಾಮು ಗೊಲ್ಲ, ಉಪತಹಶಿಲ್ದಾರ್ ವಿನಯ್, ಕುಂದಾಪುರ ಪಿಎಸ್‌ಐ ಸದಾಶಿವ ಗವರೋಜಿ ಸಹಿತ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಇದ್ದರು.
Kshetra Samachara
19/08/2022 07:14 pm