ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ 48 ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆ ಪ್ರಯುಕ್ತ ಕ್ಷೇತ್ರದ ಶ್ರೀಗಳಾದ ಪರಮಹಂಸ ಮೋಹನದಾಸ ಸ್ವಾಮೀಜಿಯವರ ಮಾಗದರ್ಶನದಲ್ಲಿ ಸಾಮೂಹಿಕ ಲಕ್ಷ್ಮಿ ಪೂಜೆ, ಕುಂಕುಮಾರ್ಚನೆ ಹಾಗೂ ಮಹಾಪೂಜೆ ನಡೆಯಿತು.
22 ವರ್ಷಗಳಿಂದ ನಿರಂತರವಾಗಿ ಅಚರಿಸಿಕೊಂಡು ಬರುತ್ತಿರುವ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆಯ ಪೂರ್ವಭಾವಿಯಾಗಿ 48 ದಿನಗಳಲ್ಲಿ ಸಾಮೂಹಿಕ ಲಕ್ಷ್ಮಿ ಪೂಜೆ ಹಾಗೂ ಚಂಡಿಕಾ ಯಾಗ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತಿದೆ. ಆಗಸ್ಟ್ 5ರಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ವಿಶೇಷವಾಗಿ ಜರುಗಲಿದೆ.
ಬಳಿಕ ಬ್ರಹ್ಮಶ್ರೀ ಅಪ್ಪಣ್ಣ ಆಚಾರ್ಯ ನೇತೃತ್ವದಲ್ಲಿ "ಶ್ರೀನಿವಾಸ ಕಲ್ಯಾಣೋತ್ಸವ" ಹಾಗೂ ಕಟೀಲು, ಧರ್ಮಸ್ಥಳ, ಮಾಣಿಲ ಮೇಳದ ಆಯ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ.
Kshetra Samachara
18/07/2022 11:39 am