ಮಂಗಳೂರು: "ಶೀಘ್ರ ಮಳೆಯಾಗಲಿ..."; ಕದ್ರಿ ಶ್ರೀ ಮಂಜುನಾಥ ಸ್ವಾಮಿಗೆ ಸೀಯಾಳಾಭಿಷೇಕ
ಮಂಗಳೂರು: ಲೋಕ ಕಲ್ಯಾರ್ಣಾರ್ಥ ಹಾಗೂ ಉತ್ತಮ ಮಳೆ ಬರಲೆಂದು ಕದ್ರಿ ಶ್ರೀ ಮಂಜುನಾಥ ದೇವರಿಗೆ ಸೀಯಾಳಾಭಿಷೇಕ ನಡೆಯಿತು.
ಈ ಬಾರಿ ಮಾನ್ಸೂನ್ ಆರಂಭಗೊಂಡರೂ ಮಂಗಳೂರಿನಲ್ಲಿ ವಾಡಿಕೆ ಮಳೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಶೀಘ್ರ ಮಳೆರಾಯನ ಆಗಮನಕ್ಕೆ ಶ್ರೀ ದೇವರಿಗೆ ಸೀಯಾಳಾಭಿಷೇಕ ಮಾಡಲಾಯಿತು.
ದೇವಾಲಯದ ಪ್ರಧಾನ ಅರ್ಚಕರಾದ ಕೃಷ್ಣ ತಂತ್ರಿಯವರು ಸೀಯಾಳಾಭಿಷೇಕವನ್ನು ನೆರವೇರಿಸಿದರು. ಈ ಸಂದರ್ಭ ಶೀಘ್ರ ಮಳೆಗೆ ಸಾಮೂಹಿಕ ಪ್ರಾರ್ಥನೆ ನಡೆಯಿತು.
Kshetra Samachara
20/06/2022 03:39 pm