ಮಂಗಳೂರು: ಬಸವಣ್ಣನವರು ಸಮಾಜದಲ್ಲಿ ಜಾತಿ, ಲಿಂಗ, ವರ್ಣಬೇಧದ ಬಗ್ಗೆ ಕ್ರಾಂತಿಕಾರಕ ಬದಲಾವಣೆಯನ್ನು ತಂದವರು ಎಂದು ಮಂಗಳೂರು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿಯವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನಗರದ ತುಳು ಭವನದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಪರಿವರ್ತನೆಯನ್ನು ತಂದರು.
ಪ್ರಸ್ತುತ ಸಂದರ್ಭದಲ್ಲೂ ಆ ವಚನಗಳ ಅಗತ್ಯವಿದೆ ಎಂದು ಮನವರಿಕೆ ಮಾಡುವ ನಿಟ್ಟಿನಲ್ಲಿ ಸರಕಾರ ಇಂತಹ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಹೇಳಿದರು.
ಇದೇ ತುಳುಭವನದಲ್ಲಿ ಬಸವೇಶ್ವರ ಸಭಾಭವನ ಮಾಡಲು ಸರಕಾರ ಅನುದಾನ ಮಂಜೂರಾತಿ ಮಾಡಬೇಕು. ಅವರ ತತ್ವ, ವಚನಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಬೇರೆ ಬೇರೆ ಚಟುವಟಿಕೆಗಳನ್ನು ಮಾಡಬೇಕೆಂಬ ಇರಾದೆ ಈ ಭಾಗದ ಜನಪ್ರತಿನಿಧಿಗಳ ಮನಸ್ಸಿನಲ್ಲಿದೆ ಎಂದು ಪ್ರೇಮಾನಂದ ಶೆಟ್ಟಿಯವರು ಹೇಳಿದರು.
Kshetra Samachara
03/05/2022 10:43 pm