ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವ ಏಪ್ರಿಲ್ 20ರವರೆಗೆ ನಡೆಯಲಿದೆ.
ಏಪ್ರಿಲ್ 16ರ ಬೆಳಿಗ್ಗೆ 8-30ಕ್ಕೆ ತುಲಾಭಾರ ಉತ್ಸವ ಹಾಗೂ ರಾತ್ರಿ ಪಾಲಕಿ ಉತ್ಸವ ಸಣ್ಣ ರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ ನಡೆಯಲಿದೆ
ಹಾಗೂ ಏಪ್ರಿಲ್ 17ರಂದು ದರ್ಶನ ಬಲಿ, ಬ್ರಹ್ಮರಥೋತ್ಸವ ಜರುಗಲಿದೆ. ಇನ್ನು ಏಪ್ರಿಲ್ 18ಕ್ಕೆ ಬಾಗಿಲು ತೆರೆಯುವ ಮುಹೂರ್ತ ಹಾಗೂ ವೀರಮಂಗಲ ಅಭವೃತ ಸ್ನಾನಕ್ಕೆ ಸವಾರಿ ನಡೆಯಲಿದೆ. ಹಾಗೂ ಏಪ್ರಿಲ್ 19ಕ್ಕೆ ಬೆಳಿಗ್ಗೆ ಧ್ವಜಾವರೋಹಣ ಮತ್ತು ಹುಲಿಭೂತ, ರಕ್ತೇಶ್ವರಿ ನೇಮ ನಡೆಯಲಿದೆ. ಕೊನೆಯ ದಿನ ಏಪ್ರಿಲ್ 20ರಂದು ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ ನೆರವೇರಲಿದೆ.
ಸಕಲ ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವರ ಆಶೀರ್ವಾದ ಸ್ವೀಕರಿಸಬೇಕೆಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮಿತಿ ತಿಳಿಸಿದೆ.
PublicNext
15/04/2022 06:34 pm