ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸೂರಾಲು ಅರಮನೆಯಲ್ಲಿ ವಿಶಿಷ್ಟ ಹೋಳಿ ಕುಣಿತ

ಕೊಕ್ಕರ್ಣೆ : ಉತ್ತರ ಕರ್ನಾಟಕದಲ್ಲಿ ಹೋಳಿಹಬ್ಬವನ್ನು ಬಣ್ಣ ಎರಚಿ, ತಮಟೆ ಬಡಿದು, ನೃತ್ಯ ಮಾಡುತ್ತಾ ಆಚರಿಸುತ್ತಾರೆ. ಆದರೆ, ಉಡುಪಿ ಜಿಲ್ಲೆಯಲ್ಲಿ ಈ ಸಮುದಾಯ ಹೋಳಿ ಹಬ್ಬವನ್ನು ವಿಶೇಷ ವೇಷ ತೊಟ್ಟು ನೃತ್ಯ ಮಾಡುತ್ತಾ ಆಚರಿಸುತ್ತಾರೆ.

ಉಡುಪಿ, ಕುಂದಾಪುರ ತಾಲೂಕಿನ ಹಾಲಾಡಿ, ಚೋರಾಡಿ, ಗೋಳಿಯಂಗಡಿ, ಶೇಡಿಮನೆ, ಬಾರ್ಕೂರು ಹಾಗೂ ಕೊರ್ಕರ್ಣೆ ಮುದ್ದೂರು ಭಾಗದಲ್ಲಿರುವ ಕುಡುಬಿಗಳು ಈ ರೀತಿ ಹಬ್ಬವನ್ನು ಸಂಭ್ರಮಿಸುತ್ತಾರೆ.

ಕೊಕ್ಕರ್ಣೆ ಸಮೀಪ ಸೂರಾಲು ಎಂಬ ಊರಿದೆ.ಇಲ್ಲಿ ರಾಜ್ಯದ ಏಕೈಕ ಮಣ್ಣಿನ ಅರಮನೆ ಇದೆ.ಇಲ್ಲಿ ವರ್ಷಂಪ್ರತಿ ನಡೆಯುವ ಹೋಳಿ ಕುಣಿತ ಕಣ್ಣಿಗೊಂದು ಹಬ್ಬ.

600 ವರ್ಷಗಳಷ್ಟು ಹಳೆಯದಾದ ಸೂರಾಲು ಅರಮನೆಯಲ್ಲಿ ನಡೆದ ಕುಡುಬಿ ಜನಾಂಗದ ಆಕರ್ಷಕ ಸಾಂಪ್ರದಾಯಿಕ ಹೋಳಿ ಕುಣಿತ ಜನರ ಕಣ್ಮನ ಸೆಳೆಯಿತು.ನೂರಾರು ಜನ ಕುಡುಬಿಯರು ವೇಷ ಧರಿಸಿ ,ವೃತ್ತಾಕಾರದಲ್ಲಿ ಕುಣಿಯುವ ದೃಶ್ಯ ಬೇರೆಲ್ಲೂ ಕಾಣಸಿಗದು.

ಶಿವನ ಆರಾಧಕರಾದ ಇವರು ಶಿವನನ್ನು ಮೆಚ್ಚಿಸುವ ಸಲುವಾಗಿ ಹೋಳಿ ವೇಷ ಧರಿಸಿ, ತಮ್ಮ ಭಾಷೆಯ ಹಾಡು ಹೇಳುತ್ತಾ ನೃತ್ಯ ಮಾಡುತ್ತಾರೆ.

Edited By :
Kshetra Samachara

Kshetra Samachara

18/03/2022 04:16 pm

Cinque Terre

6.35 K

Cinque Terre

0

ಸಂಬಂಧಿತ ಸುದ್ದಿ