ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊರೊನಾ ಬಳಿಕ ಕಟಪಾಡಿ ಕಂಬಳ ಕಲರವ !

ಕಟಪಾಡಿ: ಉಡುಪಿ, ದಕ್ಷಿಣ ಕನ್ನಡ ಕಾಸರಗೋಡು ಜಿಲ್ಲೆಗಳಲ್ಲಿ ನಡೆಯುವ ಕಂಬಳ ಅಂದರೆ ಅದೊಂದು ಹಬ್ಬ, ಜನಪದ ಆಟವನ್ನು ಅಬಾಲವೃದ್ಧರಾದಿಯಾಗಿ ಧರ್ಮ ಬೇಧ ಮರೆತು ಜನ ಸಂಭ್ರಮಿಸುತ್ತಾರೆ. ಜಿಲ್ಲೆಯ ಪ್ರಸಿದ್ಧ ಕಟಪಾಡಿ ಕಂಬಳ ವಿಜೃಂಭಣೆಯಿಂದ ನಡೆದಿದ್ದು ,ಸಾವಿರಾರು ಕಂಬಳಪ್ರಿಯರು ಸಾಕ್ಷಿಯಾದರು.

ಕಟಪಾಡಿ ಬೀಡುವಿನಲ್ಲಿ ನಡೆಯುವ ಕಂಬಳ ಆಧುನಿಕ ಸ್ಪರ್ಶ ಇರುವ ಸ್ಪರ್ಧಾತ್ಮಕ ಜೋಡುಕರೆ ಕಂಬಳ. ಕಳೆದ ಎರಡು ವರ್ಷಗಳಿಂದ ಕೊರೊನಾ ಇದ್ದ ಕಾರಣ ಕಂಬಳ ನಡೆದಿರಲಿಲ್ಲ.

ಕಂಬಳ ಕೂಟದಲ್ಲಿ ನೇಗಿಲು ಹಿರಿಯ- ಕಿರಿಯ ಹಗ್ಗ ಹಿರಿಯ-ಕಿರಿಯ, ಅಡ್ಡ ಹಲಗೆ, ಕನೆಹಲಗೆ ಹೀಗೆ ಒಟ್ಟು ಆರು ವಿಭಾಗದಲ್ಲಿ ಕಂಬಳ ನಡೆಯಿತು. ಕಟಪಾಡಿ ಕಂಬಳದ ಮತ್ತೊಂದು ವಿಶೇಷ ಅಂದರೆ, ಕಂಬಳ ಕೇತ್ರದಲ್ಲಿ ಹಲವಾರು ವರ್ಷಗಳಿಂದ ವೇಗದ ಓಟಕ್ಕೆ‌ ಹೆಸರಾಗಿದ್ದ ಹಾಗೂ ನೂರೈವತ್ತಕ್ಕೂ ಮಿಕ್ಕಿ ಪದಕಗಳನ್ನು ಪಡೆದಿರುವ ಚೆನ್ನ ಕೋಣವನ್ನು ಸಮ್ಮಾನಿಸಲಾಯಿತು.

ಒಟ್ಡಿನಲ್ಲಿ, ಕಳೆದ ಎರಡು ವರ್ಷಗಳಲ್ಲಿ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಉಡುಪಿ ಸಿಟಿಗೆ ಸಮೀಪ ಕಂಬಳ ನೋಡಿ ಕಂಬಳ ಪ್ರಿಯರು ಸಂತಸಪಟ್ಟರು.

Edited By : Nagesh Gaonkar
PublicNext

PublicNext

14/03/2022 04:14 pm

Cinque Terre

43.79 K

Cinque Terre

0

ಸಂಬಂಧಿತ ಸುದ್ದಿ