ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಬಾರಡಿಬೀಡು ಕಂಬಳೋತ್ಸವ; ಹಕ್ಕೇರಿ ಸುರೇಶ್ ಶೆಟ್ಟಿ ದಾಖಲೆ!

ಕಾರ್ಕಳ: ಇಲ್ಲಿನ ಬಾರಾಡಿಬೀಡು ಸೂರ್ಯ- ಚಂದ್ರ ಜೋಡುಕರೆ ಕಂಬಳದಲ್ಲಿ3 ವಿಭಾಗದ ಕೋಣಗಳನ್ನು ಓಡಿಸುವ ಮೂಲಕ ಫೈನಲ್ ಪ್ರವೇಶಿಸಿ 3 ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದು ಹಕ್ಕೇರಿ ಸುರೇಶ್ ಎಂ.ಶೆಟ್ಟಿ ದಾಖಲೆ ಬರೆದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಹೊಕ್ಕಾಡಿಗೋಳಿ ಹಕ್ಕೇರಿಯ ಸುರೇಶ್‌, ಕಂಬಳ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, 250ಕ್ಕೂ ಅಧಿಕ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಬೋಳದಗುತ್ತು ಸತೀಶ್ ಶೆಟ್ಟಿ ಯಜಮಾನಿಕೆಯ ಕೋಣಗಳನ್ನು ಓಡಿಸಿ ಸತತ 6 ವರ್ಷ ಡಬಲ್‌ ಹ್ಯಾಟ್ರಿಕ್‌, ಸರಣಿ ಶ್ರೇಷ್ಠ ಪ್ರಶಸ್ತಿ ದಾಖಲಿಸಿದ ಹಿರಿಮೆ‌ ಇವರದು. ಬಂಗಾಡಿ ಕಂಬಳದಲ್ಲಿ 9.39 ಸೆಕೆಂಡ್‌ನಲ್ಲಿ 100 ಮೀ. ಕ್ರಮಿಸಿ ಗಮನಾರ್ಹ ಸಾಧನೆಗೈದಿದ್ದು, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತರು ಕೂಡ.

ಈ ಬಾರಿಯೂ ಬಾರಾಡಿ ಬೀಡು ಕಂಬಳದಲ್ಲಿ ಒಟ್ಟು 162 ಜೊತೆ ಕೋಣಗಳಿದ್ದು, ಅದರಲ್ಲಿ ಸುರೇಶ್ ಎಂ. ಶೆಟ್ಟಿ ಹಗ್ಗ ಹಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ಹೀಗೆ 3 ವಿಭಾಗದಲ್ಲಿಯೂ ಪ್ರಥಮ ಸ್ಥಾನ ಗೆದ್ದಿದ್ದಾರೆ.

Edited By :
Kshetra Samachara

Kshetra Samachara

06/02/2022 09:24 pm

Cinque Terre

6.09 K

Cinque Terre

1

ಸಂಬಂಧಿತ ಸುದ್ದಿ