ಕಾಪು: ಶಿರ್ವ ನಡಿಬೆಟ್ಟು ಸೂರ್ಯ- ಚಂದ್ರ ಜೋಡುಕರೆ ಕಂಬಳ ಇಂದು ಶಿರ್ವ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ಜರುಗಿತು.
ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎಲ್ಲೂರುಗುತ್ತು ಪ್ರಫುಲ್ಲ ಶೆಟ್ಟಿ ಕಂಬಳೋತ್ಸವಕ್ಕೆ ಚಾಲನೆ ನೀಡಿದರು.
ಬೆಳಗ್ಗೆ ಬಂಟ ಕೋಲದ ಬಳಿಕ ನಡಿಬೆಟ್ಟು ಮನೆಯಿಂದ ಕೋಣಗಳನ್ನು ಮೆರವಣಿಗೆಯಲ್ಲಿ ಕಂಬಳ ಕರೆಗೆ ತಂದ ಬಳಿಕ ಕಂಬಳಕ್ಕೆ ಹಸಿರು ನಿಶಾನೆ ನೀಡಲಾಯಿತು. ಮನೆತನದ ಕೋಣಗಳನ್ನು ಗದ್ದೆಗಿಳಿಸಿ ಓಡಿಸುವುದರೊಂದಿಗೆ ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನಗೊಂಡಿತು.
ಕಂಬಳದಲ್ಲಿ ಹಿರಿಯ ಕೋಣಗಳ ಜೋಡಿ 15, ಕಿರಿಯ 30 ಜೋಡಿ ಭಾಗವಹಿಸಿದವು.
ಶತಮಾನದಿಂದ ನಡೆದು ಬರುತ್ತಿರುವ ಧಾರ್ಮಿಕ ಹಿನ್ನೆಲೆ ಹೊಂದಿರುವ ಶಿರ್ವ ನಡಿಬೆಟ್ಟು ಕಂಬಳವು ನಡಿಬೆಟ್ಟು ಚಾವಡಿಯ ದೈವ ಜುಮಾದಿಗೆ ಪೂಜೆ ಸಲ್ಲಿಸಿದ ಬಳಿಕ ಬಂಟ ಕೋಲ ನಡೆದು, ಮೆರವಣಿಗೆಯಲ್ಲಿ ಕೊಂಬು- ವಾದ್ಯ ಘೋಷಗಳೊಂದಿಗೆ ಕೋಣಗಳನ್ನು ಗದ್ದೆಗಿಳಿಸಲಾಯಿತು.
ಶಿರ್ವದ ದೈವ ದೇವರುಗಳ ಉತ್ಸವಗಳಲ್ಲಿ ಒಂದಕ್ಕೊಂದು ಸಂಬಂಧವಿದ್ದು, ಸಂಪ್ರದಾಯ ಬದ್ಧವಾಗಿ ಕಂಬಳ ನಡೆಯುತ್ತದೆ. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಶಿರ್ವ ನಡಿಬೆಟ್ಟು ಮನೆಯ ಗುರಿಕಾರ ಹಾಗೂ ಕಂಬಳ ವ್ಯವಸ್ಥಾಪಕ ಶಶಿಧರ ಹೆಗ್ಡೆ, ಶಿರ್ವ ನಡಿಬೆಟ್ಟು ದಾಮೋದರ ಚೌಟ, ಅಟ್ಟಿಂಜೆ ಶಂಭು ಶೆಟ್ಟಿ, ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್. ಪಾಟ್ಕರ್, ಶಿರ್ವ ಆರೋಗ್ಯ ಮಾತಾ ದೇವಾಲಯ ಪ್ರಧಾನ ಧರ್ಮಗುರು ರೆ.ಫಾ. ಡೆನ್ನಿಸ್ ಡೇಸಾ, ಸಹಾಯಕ ಧರ್ಮಗುರು ಫಾ. ರೋಲ್ವಿನ್ ಅರಾನ್ಹಾ, ದಾಮೋದರ ಅಂಚನ್, ತಮ್ಮಣ್ಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
28/11/2021 08:07 pm