ಬಜಪೆ: ಸುಗ್ಗಿ ಬೇಸಾಯಕ್ಕೆ ಮುನ್ನುಡಿಯಾಗಿ ಪೆರಾರ ಕಬೆತ್ತಿಗುತ್ತುವಿನಲ್ಲಿ ಬಾರೆಪಾಡು ಕಂಬಳವುಸಂಪ್ಪನ್ನಗೊಂಡಿತು.ಕಬೆತ್ತಿಗುತ್ತು ಮನೆತನದ ದುಗ್ಗಣ್ಣ ಬೈದರ ಕಾಲದಿಂದಲೂ ಕಂಬಳದ ವಿಧಿ ಗಳನ್ನು ಚ್ಯುತಿ ಬಾರದಂತೆ ನಡೆಸಿಕೊಂಡು ಬರುತ್ತಿದ್ದು,ಕಂಬಳದ ಮುನ್ನಾ ದಿನ ಸಾಂಪ್ರದಾಯಿಕ ವಿಧಿಗಳು ನಡೆಯುತ್ತದೆ.ಕಂಬಳ ನಡೆಯುದಕ್ಕಿಂತ ಮುಂಚೆ ದೈವಶಕ್ತಿಗಳ ಸನ್ನಿಧಿಗೆ ಕಂಬಳ ಕೋಣಗಳ ಸಹಿತ ಅಗಮಿಸಿ ಕಂಬಳದಲ್ಲಿ ಓಡುವ ಕೋಣಗಳು ಕೂಡಾ ಮೋಣ ಕಾಲೂರಿ ದೈವಶಕ್ತಿಗಳಿಗೆ ನಮಿಸುತ್ತದೆ.ಮೂರು ಬಾರಿ ಕಂಬಳದ ಗದ್ದೆಯಲ್ಲಿ ಕೋಣಗಳು ಓಡಿ ಮಂಜೊಟ್ಟಿ ಸೇರಿದ ಬಳಿಕ ಬಾರೆ ಪಗಪುನು(ಬಾಳೆ ಗಿಡ ಬದಲಾಯಿಸುವುದು)ಎಂಬ ಸಾಂಪ್ರದಾಯಿಕ ಕ್ರಮ ನಡೆದು ಗದ್ದೆಯಲ್ಲಿ ಬಾಳೆಗಿಡವನ್ನು ನೆಡಲಾಗುತ್ತದೆ.ನಂತರ ಕಂಬಳಕ್ಕೆ ಆಗಮಿಸಿದ ಎಲ್ಲರಿಗೂ ಸಹ ಬೋಜನ ವಿರುತ್ತದೆ.ಕಂಬಳದಲ್ಲಿ ಈ ಬಾರಿ ಮೂರು ಜೋಡಿ ಕೋಣಗಳು ಪಾಲ್ಗೊಂಡಿದ್ದವು.
ಕಬೆತ್ತಿಗುತ್ತು ಮೋಹನ ಪೂಜಾರಿ ಅವರ ನೇತೃತ್ವದಲ್ಲಿ ಕಬೆತ್ತಿಗುತ್ತು ಬಾರೆಪಾಡು ಕಂಬಳವು ಜರಗುತ್ತದೆ.ಈ ಸಂದರ್ಭ ಪಡುಪೆರಾರ ಗ್ರಾ.ಪಂ ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ,ಬಜಪೆ ವ್ಯವಸಾಯ ಬ್ಯಾಂಕ್ ನಿರ್ದೇಶಕ ರಿತೇಶ್ ಶೆಟ್ಟಿ,ಭಾಸ್ಕರ ಮಲ್ಲಿ,ಡೆನಿಸ್ ಡಿ ಸೋಜ,ಅರುಣ್ ಶೆಟ್ಟಿ ನಡಿಗುತ್ತು,ಪ್ರಕಾಶ್ ಶೆಟ್ಟಿ ಬ್ರಾಣ ಬೆಟ್ಟುಗುತ್ತು,ಕಾಶಿನಾಥ್ ಕಾಮತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
11/11/2021 08:00 pm