ವರದಿ :ದಾಮೋದರ ಮೊಗವೀರ ನಾಯಕವಾಡಿ.
ಬೈಂದೂರು :ಇಂದು ದೇಶದ ಉದ್ದಗಲದಲ್ಲಿ ಗಣೇಶ ಉತ್ಸವವನ್ನು ಭಕ್ತಿ. ಶ್ರದ್ಧೆ .ಸಂಭ್ರಮ ಸಡಗರದಿಂದ ಆಚರಿಸಲ್ಪಡುತ್ತಿದೆ .ಇಂದಿನ ಗಣೇಶೋತ್ಸವ ಕೀರ್ತಿ ಮಾನನೀಯ ಬಾಲಗಂಗಾಧರ್ ತಿಲಕ್ ಅವರಿಗೆ ಸಲ್ಲಬೇಕು .
ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುತ್ತೇನೆ ಎಂದು ಗರ್ಜಿಸಿದ ವೀರ ಸೇನಾನಿ...ಅಪ್ರತಿಮ ದೇಶಭಕ್ತ ತಿಲಕರ ಪರಿಕಲ್ಪನೆಯೇ ಈ ಗಣೇಶೋತ್ಸವ ಸಂಭ್ರಮ .
ಹೌದು ಇಡೀ ದೇಶವನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಜೋಡಿಸುವ ಕಾರಣಕ್ಕಾಗಿಯೇ ಜಾತಿ .ವರ್ಗ .ಪಂಥ .ಮತ ಗಳೆನ್ನದೆ ಹೋರಾಟದಲ್ಲಿ ಭಾಗವಹಿಸಿ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿದ್ದು ಇದೇ ಗಣೇಶೋತ್ಸವ .
ತ್ರಾಸಿ .ಕಂಚುಗೋಡು .ಗಂಗೊಳ್ಳಿ .ಪರಿಸರದಲ್ಲಿ ಸರಳವಾಗಿ ಮನೆ ಮಂದಿರಗಳಲ್ಲಿ ಗಣೇಶೋತ್ಸವ ಆಚರಣೆ ಮಾಡಿದ್ದು . ಇಡೀ ವಿಶ್ವಕ್ಕೆ ಬಂದಿರುವ ಕರೋನಾ ಮಹಾಮಾರಿಯಿಂದ ಆದಷ್ಟು ಬೇಗನೆ ಮುಕ್ತಿ ಸಿಗಲಿ. ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ ಎಂದು "ಕಂಚುಗೋಡು ಶ್ರೀ ಮಣಿ ನಾಥ ನಂದಿಕೇಶ್ವರ ದೇವಸ್ಥಾನ . ಸ್ನೇಹ ರಂಗಮಂದಿರ ಹೊಸಪೇಟೆ . ರಾಮಚಂದ್ರ ಸೇರುಗಾರ್ ಯಾನೆ ಬಾಬಣ್ಣ ಸೇರುಗಾರ್ ಗಂಗೊಳ್ಳಿ" ಹಾಗೂ ಸಾರ್ವಜನಿಕರು ಗಣೇಶನಲ್ಲಿ ಪ್ರಾರ್ಥಿಸಿದರು .
Kshetra Samachara
10/09/2021 07:43 pm