ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮುಲ್ಕಿ ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಫೆಸ್ತ್ ಹಬ್ಬ

ಮುಲ್ಕಿ: ಮುಲ್ಕಿ ಕೊಸೆಸಾಂವ್ ಅಮ್ಮನವರ ಚರ್ಚ್ ನಲ್ಲಿ ಮೊಂತಿ ಫೆಸ್ತ್ ಹಬ್ಬ ಸರಳ ರೀತಿಯಲ್ಲಿ ಆಚರಿಸಲಾಯಿತು. ಚರ್ಚಿನ ಫಾದರ್ ಸಿಲ್ವೆಸ್ಟರ್ ಡಿಕೋಸ್ತ ತೆನೆಗಳ ಪವಿತ್ರೀಕರಣ ಮತ್ತು ಪೂಜಾ ವಿಧಿಗಳನ್ನು ನೆರವೇರಿಸಿ ಮಾತನಾಡಿ, ತೆನೆಹಬ್ಬ ಒಂದು ಪ್ರಕೃತಿಯ ಹಬ್ಬವಾಗಿದ್ದು ಪ್ರಕೃತಿ ನಮ್ಮ ತಾಯಿ ಇದ್ದಂತೆ, ಮಾತೆ ಮರಿಯಮ್ಮನವರ ಜನ್ಮದಿನವಾದ ಇಂದು ಪ್ರಕೃತಿಮಾತೆಯನ್ನು ತೆನೆ ಹಬ್ಬದ ರೂಪದಲ್ಲಿ ಆಚರಿಸುತ್ತಿದ್ದೇವೆ.

ಈ ಬಾರಿ ಹಬ್ಬ ಸರಳ ರೀತಿಯಲ್ಲಿ ಆಚರಿಸಿದ್ದು ಲೋಕಕ್ಕೆ ಬಂದಿರುವ ಕೊರೊನಾ ಮಹಾಮಾರಿ ಸಹಿತ ಸಮಸ್ತ ಕಂಟಕಗಳು ದೂರವಾಗಲಿ ಎಂದು ಆಶೀರ್ವಚನ ನೀಡಿದರು.

ಮುಲ್ಕಿ ದೈವಿಕ ಕರೆ ಕೇಂದ್ರದ ಪಾದರ ಅಬ್ರಹಾಂ ಡಿಸೋಜಾ ಆಗಮಿಸಿದ ಭಕ್ತರಿಗೆ ತೆನೆಗಳನ್ನು ವಿತರಿಸಿದರು. ಈ ಸಂದರ್ಭ ಡಿವೈನ್ ಕಾಲ್ ಸೆಂಟರ್ ನ ಫಾ. ಅಬ್ರಹಾಂ ಡಿಸೋಜಾ, ಫಾ. ಜೋರ್ಜ್ ಕ್ರಾಸ್ತ, ಕೊಸೆಸಾಂವ್ ಅಮ್ಮನವರ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಓಸ್ವಾಲ್ಡ್ ಕೊರೆಯಾ, ಕಾರ್ಯದರ್ಶಿ ಜೋವಿನ್ ಪ್ರಕಾಶ್ ಡಿಸೋಜಾ, ಹಾಗೂ ಪಾಲನಾ ಮಂಡಳಿಯ ಸದಸ್ಯರು,ವಾರ್ಡ್ ಗುರಿಕಾರರು, ಧರ್ಮ ಸಭೆಯ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

08/09/2021 10:46 am

Cinque Terre

5.05 K

Cinque Terre

0