ಮಂಗಳೂರು: ಕೊಲ್ಯ ಮಠದ ಶ್ರೀದೇವಿ ಮೂಕಾಂಬಿಕಾ ದೇವಸ್ಥಾನದ 33ನೇ ವಾರ್ಷಿಕ ಪ್ರತಿಷ್ಠ ಮಹೋತ್ಸವ ವಾರ್ಷಿಕ ಜಾತ್ರೆಯು ಫೆ.17-ಫೆ.21ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಮಹಾಬಲ ಶೆಟ್ಟಿ ಕೂಡ್ಲು ಹೇಳಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪರಮಹಂಸ ಧ್ಯಾನಯೋಗಿ ಶ್ರೀ ಶಿವಬಾಲಯೋಗಿ ಮಹಾರಾಜ್ ಅವರಿಂದ ಸನ್ಯಾಸ ದೀಕ್ಷೆ ಪಡೆದ ಕೊಲ್ಯ ಕ್ಷೇತ್ರದಲ್ಲಿ ಆಶ್ರಮ ಸ್ಥಾಪಿಸಿರುವ ಶ್ರೀ ರಮಾನಂದ ಸ್ವಾಮಿಯವರು ಮುಂದೆ ಕೊಲ್ಯ ಮಠವನ್ನು ಸ್ಥಾಪಿಸಿದರು. ಬಳಿಕ 1988 ರಂದು ದೇವಸ್ಥಾನ ನಿರ್ಮಿಸಿದರು ಎಂದು ಹೇಳಿದರು.
ಇದೀಗ ಶ್ರೀಕ್ಷೇತ್ರದ 33ನೇ ವಾರ್ಷಿಕ ಪ್ರತಿಷ್ಠಾ ಉತ್ಸವವು ನಡೆಯಲಿದೆ. ಈ ಸಂದರ್ಭದಲ್ಲಿ ನಿತ್ಯವೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಲಿದೆ ಎಂದು ಮಹಾಬಲ ಶೆಟ್ಟಿ ಕೂಡ್ಲು ಹೇಳಿದರು.
Kshetra Samachara
13/02/2021 03:18 pm