ಮುಲ್ಕಿ: ಮುಲ್ಕಿ ತಾಲೂಕಿನ ಶ್ರೀ ರಾಮ ಜನ್ಮಭೂಮಿ ನಿಧಿ ಸಮರ್ಪಣೆ ಅಭಿಯಾನದ ಉದ್ಘಾಟನೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಾನದಲ್ಲಿ ನಡೆಯಿತು.
ಅರ್ಚಕ ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು, ರಾಮಜನ್ಮಭೂಮಿ ನಿರ್ಮಾಣದ ನಿಧಿ ಅಭಿಯಾನಕ್ಕೆ ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ ನೀಡಿದರು.
ಈ ಸಂದರ್ಭ ಸಂಘದ ಪ್ರಮುಖರಾದ ಸೋಂದಾ ಭಾಸ್ಕರ ಭಟ್ ಮಾತನಾಡಿ, ಶ್ರೀ ರಾಮಜನ್ಮಭೂಮಿ ನಿಧಿ ಅಭಿಯಾನ ಒಬ್ಬ ವ್ಯಕ್ತಿಯ ಕೆಲಸ ಅಲ್ಲ, ಸಮಷ್ಟಿಯ ಕೆಲಸ. ಅಭಿಯಾನಕ್ಕೆ ಎಲ್ಲರೂ ಸಹಕಾರ ನೀಡಿ ಹಿಂದೂ ಸಮಾಜದ ಸ್ವಾಭಿಮಾನವನ್ನು ಜಾಗೃತಗೊಳಿಸೋಣ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಪ್ರತಿ ಹಿಂದೂಗಳು ಅಳಿಲು ಸೇವೆ ಮೂಲಕ ಸಹಕಾರ ನೀಡಿ ಭವ್ಯ ಶ್ರೀ ರಾಮಮಂದಿರ ನಿರ್ಮಿಸೋಣ ಎಂದರು. ದೇವಳದ ಅನುವಂಶಿಕ ಮೊಕ್ತೇಸರ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ, ಶ್ರೀರಾಮ ಸಮಸ್ತ ಹಿಂದೂ ಬಾಂಧವರ ಆರಾಧ್ಯದ ಪ್ರತೀಕವಾಗಿದ್ದು, ನಿಧಿ ಸಂಗ್ರಹಕ್ಕೆ ಎಲ್ಲರೂ ಸಹಕರಿಸೋಣ ಎಂದರು.
ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಜಿಲ್ಲಾ ಸಂಘ ಸಂಚಾಲಕ ವೈ.ಎನ್. ಸಾಲ್ಯಾನ್, ಮುಲ್ಕಿ ಶ್ರೀ ರಾಮಜನ್ಮಭೂಮಿ ಅಭಿಯಾನ ಪ್ರಮುಖ್ ಸಂಪತ್ ಕಾರ್ನಾಡ್, ಸುನಿಲ್ ಆಳ್ವ, ನಿಧಿ ಸಮರ್ಪಣೆ ಅಭಿಯಾನದ ಪ್ರಮುಖ್ ರಾಮಚಂದ್ರ ಶೆಣೈ, ರಾಜೇಶ್ ದಾಸ್, ಹರಿದಾಸ್ ಭಟ್ ತೋಕೂರು, ವೆಂಕಟೇಶ ಹೆಬ್ಬಾರ್ ,ಮುಲ್ಕಿ ನ.ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
15/01/2021 10:29 am