ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ: ಜ.15ರಿಂದ ದೇಣಿಗೆ ಸಂಗ್ರಹ

ಮಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯಲಿರುವ ದೇಣಿಗೆ ಸಂಗ್ರಹ ಜನವರಿ 15 ರಿಂದ ಫೆಬ್ರವರಿ 5ರ ವರೆಗೆ ನಡೆಯಲಿದ್ದು, ನಿಧಿ ಸಂಗ್ರಹಕ್ಕಾಗಿ ಕರಾವಳಿಯಲ್ಲಿ ಸಾವಿರಾರು ಕಾರ್ಯಕರ್ತರು ಸಿದ್ಧರಾಗಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ತಿಳಿಸಿದ್ದಾರೆ.

ಮಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,‌ ಮಕರ ಸಂಕ್ರಮಣದ ಮರುದಿನದಿಂದ ಆರಂಭಗೊಂಡು 20 ದಿನಗಳ ಕಾಲ ಮಂಗಳೂರು ವಿಭಾಗದ ಕೊಡಗು, ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಿಧಿ ಸಂಗ್ರಹ ನಡೆಯಲಿದೆ.

ವಾರ್ಡ್ ಮಟ್ಟದಲ್ಲಿ 4 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಸಿದ್ಧರಾಗಿದ್ದು, ಪ್ರತೀ ಹಿಂದೂಗಳ ಮನೆ- ಮನೆಗೆ ತೆರಳಿ ನಿಧಿ ಸಂಗ್ರಹಿಸಲಿದ್ದಾರೆ. ಮಂಗಳೂರು ವಿಭಾಗದಲ್ಲಿ 25 ಕೋಟಿ ರೂಪಾಯಿ ಸಂಗ್ರಹದ ಗುರಿ ಹೊಂದಿದ್ದೇವೆ. ನಿಧಿ ಸಂಗ್ರಹದ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲೂ ಕ್ರಮ ಕೈಗೊಂಡಿದ್ದಾಗಿ ತಿಳಿಸಿದರು.

Edited By : Manjunath H D
Kshetra Samachara

Kshetra Samachara

12/01/2021 02:21 pm

Cinque Terre

11.81 K

Cinque Terre

1