ಮಂಗಳೂರು: ಮಂಗಳೂರು ದಸರಾ ಅಂದ್ರೆ ನೆನಪಾಗುವುದು ಕುದ್ರೋಳಿ ದೇಗುಲ. ಮಂಗಳೂರು ದಸರಾದ ರೂವಾರಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರು. ಇವರ ನೇತೃತ್ವದಲ್ಲಿ ಹಲವಾರು ವರ್ಷಗಳಿಂದ ಮಂಗಳೂರು ದಸರಾ ಕುದ್ರೋಳಿ ದೇಗುಲದ ಆವರಣದಲ್ಲಿ ನಡೆದು ಬಂದಿದೆ.
ನಿನ್ನೆ ಸಮಾಪ್ತಿಗೊಂಡ ಮಂಗಳೂರು ದಸರಾ ಮೆರವಣಿಗೆಯಲ್ಲಿ ಶಿವ ಫ್ರೆಂಡ್ಸ್ ತಂಡದ ಹುಲಿವೇಷ ಹಾಕಿದ್ದ ಯುವಕನ ಹೊಟ್ಟೆ ಯ ಮೇಲೆ ಚಿತ್ರಕಲಾವಿದ ಮಂಜೇಶ್ವರ ನಿವಾಸಿ ತಾರನಾಥ ಆಚಾರ್ಯ ಕಡಂಬಾರು ಅವರು ಜನಾರ್ದನ ಪೂಜಾರಿಯವರ ಸುಂದರವಾದ ಚಿತ್ರವನ್ನು ಬಿಡಿಸಿದ್ದು ಎಲ್ಲರ ಗಮನ ಸೆಳೆಯಿತು.ಈ ಮೂಲಕ ಚಿತ್ರಕಲಾವಿದ ಮಂಗಳೂರು ದಸರಾದ ರೂವಾರಿ ಜನಾರ್ದನ ಪೂಜಾರಿಯವರಿಗೆ ಗೌರವ, ಅಭಿವಂದನೆ ಸಲ್ಲಿಸಿದರು.
Kshetra Samachara
27/10/2020 03:22 pm