ಮಂಗಳೂರು: ಮೊಗವೀರರು ಮತ್ಸ್ಯಾಧಿದೇವತೆ ಎಂದೇ ನಂಬಿರುವ ಲಕ್ಷಾಂತರ ಮಂದಿ ಭಕ್ತರಿರುವ ಸುಂದರ ದೇಗುಲವೆಂದೇ, ಪ್ರಸಿದ್ಧಿ ಪಡೆದ ಮಂಗಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಾವಧಿ ನವರಾತ್ರಿ ಉತ್ಸವದ ಸಡಗರ. ಮಹಾಮಾತೆ ಶ್ರೀ ಮಾರಿಯಮ್ಮ ದೇವಿಗೆ ವಿವಿಧ ಹೂವುಗಳಿಂದ ಸಿಂಗರಿಸಿ ವಿಶೇಷ ಮಹಾಪೂಜೆಯನ್ನು ನೆರವೇರಿಸಲಾಯಿತು. ಬಳಿಕ ನವರಾತ್ರಿ ಉತ್ಸವದ ಪ್ರಯುಕ್ತ ದೇವರಿಗೆ ರಂಗಪೂಜೆಯನ್ನು ನಡೆಸಲಾಯಿತು. ಈ ಸಂದರ್ಭ ದೇವರಿಗೆ ಭಕ್ತಿಯಿಂದ ದೀಪ ಹಚ್ಚುವ ಮೂಲಕ ಭಕ್ತರು ದೇವಿಯ ಉತ್ಸವದಲ್ಲಿ ಪಾಲ್ಗೊಂಡರು.
ಕೋವಿಡ್ ಕಾರಣದಿಂದಾಗಿ ಈ ಬಾರಿ ಕ್ಷೇತ್ರದಲ್ಲಿ ಸರಳವಾಗಿ ನವರಾತ್ರಿ ಮಹೊತ್ಸವ ಆಚರಿಸಲಾಯಿತು.
Kshetra Samachara
26/10/2020 10:40 am