ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುದ್ರೋಳಿಯಲ್ಲಿ ಸಂಪನ್ನಗೊಳ್ಳಲಿದೆ ಮಂಗಳೂರು ದಸರಾ, ನವದುರ್ಗೆಯರ, ಶಾರದಾ ಮಾತೆಯ ವಿಸರ್ಜನೆ,

ಮಂಗಳೂರು: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಂಭ್ರಮದ ದಸರಾ ಮಹೋತ್ಸವ ನಡೆಯುತ್ತಿದೆ. ವಿದ್ಯುತ್ ದೀಪಗಳಿಂದ ಝಗಮಗಿಸುವ ದೇಗುಲ, ರಾಜಬೀದಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಬಾರಿಯ ಸರಳ ದಸರಾ ಮಹೋತ್ಸವಕ್ಕೆ ಮೆರುಗು ನೀಡಿದೆ. ಈ ದಸರಾ ಮಹೊತ್ಸವ ಇಂದು ಸಂಪನ್ನಗೊಳ್ಳಲಿದೆ.

ಬೆಳಗ್ಗೆ ವಾಗೀಶ್ವರಿ ದುರ್ಗಾ ಹೋಮ, ಮಧ್ಯಾಹ್ನ ಶಿವ ಪೂಜೆ, ಶ್ರೀ ದೇವಿಗೆ ಪುಷ್ಪಾಂಲಕಾರ ಪೂಜೆ ನಡೆಯಲಿದೆ. ನಂತರ ರಾತ್ರಿ 7 ಘಂಟೆಗೆ ಪುಷ್ಕರಣಿಯಲ್ಲಿ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆಯ ಬಳಿಕ ನವದುರ್ಗೆ ಹಾಗೂ ಶಾರದಾ ಮಾತೆಯ ವಿಸರ್ಜನೆ ನಡೆಯಲಿದೆ. ಸಾವಿರಾರು ಭಕ್ತರು ಬರುವ ಹಿನ್ನೆಲೆಯಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Edited By : Nagesh Gaonkar
Kshetra Samachara

Kshetra Samachara

26/10/2020 10:35 am

Cinque Terre

35.2 K

Cinque Terre

1